14 ಮಕ್ಕಳ ಮಹಾ ಪಿತನಿಗೆ ಉದ್ಯೋಗವೇ ಇಲ್ಲ!

britain-jobless-man-fathers-14-children
ಲಂಡನ್, ನ. 30: 14 ಮಕ್ಕಳ ಈ ಮಹಾ ಪಿತನಿಗೆ ಉದ್ಯೋಗವೇ ಇಲ್ಲ! ಅಥವಾ ಅದೇ ಅವನ ಉದ್ಯೋಗ ಅಂತಲೂ ಹೇಳಬಹುದು. ಆದರೆ ಈ ಮಹಾ ಪಿತ 13 ಯುವತಿಯರಿಂದ ಈ ಫಸಲು ಪಡೆದಿದ್ದಾನೆ. ಜತೆಗೆ ಇನ್ನೂ ಒಂದೆರಡು ಮಕ್ಕಳಿಗೆ ಸದ್ಯದಲ್ಲೇ ತಂದೆಯಾಗಲಿದ್ದಾನೆ.

ಜ್ಯಾಮಿ ಕುಮ್ಮಿಂಗ್ ಎಂಬ ಇನ್ನೂ 34 ವರ್ಷದ ಸ್ಕಾಟ್ಲೆಂಡಿನ ಡ್ಯೂಡಿ ನಿವಾಸಿ ಜಗತ್ತಿನ ಅತ್ಯಂತ ಬೇಜವಾಬ್ದಾರಿ ತಂದೆ ಎನಿಸಿಕೊಂಡಿದ್ದಾನೆ. ಆ ಮಕ್ಕಳು, ತಾಯಂದಿರ ಖರ್ಚಿಗೆ ದುಡ್ಡು ಕೊಡಲು ಇವನ ಬಳಿ ಒಂದು ನಯಾ ಪೈಸೆ ಇಲ್ಲ.

ಎರಡು ವಾರದ ಹಿಂದೆ ಈ ಪಿತಾಮಹನ 14ನೇ ಮಗುವಿಗೆ 19 ವರ್ಷದ ತರುಣಿ ತಾಯಿಯಾಗಿದ್ದಾಳೆ. ಇನ್ನು, ಇವನ 19 ವರ್ಷದ ಮತ್ತೊಬ್ಬ ಗರ್ಲ್ ಫ್ರೆಂಡ್ ಸದ್ಯದಲ್ಲೇ ಇನ್ನೂ ಒಂದು ಮಗುವನ್ನು ಈ ಬಡವನಿಗೆ ದಯಪಾಲಿಸಲಿದ್ದಾಳೆ. ಅಷ್ಟೇ ಅಲ್ಲ ಹೊಸ ವರ್ಷದ ವೇಳೆಗೆ ಇವನ 17 ವರ್ಷದ ಮತ್ತೊಬ್ಬ ಗರ್ಲ್ ಫ್ರೆಂಡಿಗೆ ವೈದ್ಯರು ಡೇಟ್ ಕೊಟ್ಟಿದ್ದಾರೆ.

'ನನ್ನ ಮಗ ಕುಮ್ಮಿ ಇನ್ನಾದರೂ ಜವಾಬ್ದಾರಿ ಹೊರಬೇಕಾಗಿದೆ. ಇವನಿಂದ ನನಗೆ ತೀವ್ರ ಮುಜುಗುರವಾಗುತ್ತಿದೆ. 17ನೇ ವಯಸ್ಸಿಗೆ ತಾನು ಅಪ್ಪನಾಗುತ್ತಿರುವುದಾಗಿ ಘೋಷಿಸಿದ' ಎಂದು ಕುಮ್ಮಿಂಗ್ ತಾಯಿ ಲೊರೈನ್ ಆತಂಕ ವ್ಯಕ್ತಪಡಿಸಿದ್ದಾರೆ. ಅಂದಹಾಗೆ, ಈ ಎಲ್ಲ 14 ಮೊಮ್ಮಕ್ಕಳನ್ನೂ ಅಜ್ಜಿ ಲೊರೈನ್ ಅವರೇ ನೋಡಿಕೊಳ್ಳುತ್ತಿದ್ದಾರೆ. ಆದರೆ ಅಪ್ಪ ಕುಮ್ಮಿಂಗ್ ಮಾತ್ರ ಆ ಮಕ್ಕಳ ದೇಖಾರೇಕಿ ಮಾಡುತ್ತಿಲ್ಲ.

ಹಾಗಂತ ಕುಮ್ಮಿಂಗ್ ತನ್ನ ಮೊದಲ ಪ್ರಿಯತಮೆಯನ್ನು ಮಗುವಾಗುತ್ತಿದ್ದಂತೆ ವಿವಾಹವಾಗಲಿಲ್ಲ. ಬದಲಿಗೆ ಅವಳ ಕಸಿನ್ ಜತೆ ಚಕ್ಕಂದ ಶುರುವಿಟ್ಟುಕೊಂಡ. ಮುಂದೆ 1998ರಲ್ಲಿ ಪಕ್ಕದ ಮನೆಯ ಯುವತಿ ಜತೆ ಒಂದು ರಾತ್ರಿ ಕಳೆದ ಪುಣ್ಮಾತ್ಮ ಕುಮ್ಮಿಂಗ್ ಅವಳಿಗೂ ಮಗುವನ್ನು ಕರುಣಿಸಿದ. ಇಷ್ಟಾಗಿಯೂ ಕುಮ್ಮಿಂಗ್ ತನ್ನ ಸಾಹಸವನ್ನು ನಿಲ್ಲಿಸಿಲ್ಲ. ಏಕೆಂದರೆ ಅವನು ಅದಕ್ಕೇ ಅಡಿಕ್ಟ್ ಆಗಿಬಿಟ್ಟಿದ್ದಾನಂತೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+