ಪತ್ರಕರ್ತೆ, ಇನ್ಫಿ ಉದ್ಯೋಗಿ ಸ್ಮಿತಾ ರಾವ್ ಆತ್ಮಹತ್ಯೆ

ಸ್ಮಿತಾ ಅವರ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಮಾನಸಿಕ ಒತ್ತಡ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಸ್ಮಿತಾ ಅವರು ತಮ್ಮ ಕೋಣೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಡೆತ್ ನೋಟ್ ಏನೂ ಸಿಕ್ಕಿಲ್ಲ. ದಾಂಪತ್ಯ ಕಲಹವೂ ಕಾರಣ ಇರಬಹುದು ಎಂದು ಹೆಣ್ಣೂರು ಪೊಲೀಸರು ಹೇಳಿದ್ದಾರೆ.
ಇನ್ಫೋಸಿಸ್ ನಲ್ಲಿ ಉಪ ವ್ಯವಸ್ಥಾಪಕಿ(ವೆಬ್ ವಿಭಾಗ)ಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸ್ಮಿತಾ ಅವರು ಇನ್ಫೋಸಿಸ್ ವೆಬ್ ತಾಣವನ್ನು ನಿರ್ವಹಿಸುತ್ತಿದ್ದರು. ಇದಕ್ಕೂ ಮುಂಚೆ ಬೆಂಗಳೂರು ಮಿರರ್ ಪತ್ರಿಕೆಯಲ್ಲಿ ನಗರ ವಿಭಾಗದ ಸುದ್ದಿ ಸಂಪಾದಕಿಯಾಗಿ ಕಾರ್ಯನಿರ್ವಹಿಸಿದ್ದರು.
ಏಷ್ಯಯನ್ ಕಾಲೇಜ್ ಆಫ್ ಜರ್ನಲಿಸಂನ ವಿದ್ಯಾರ್ಥಿಯಾಗಿದ್ದ ಸ್ಮಿತಾ ಅವರು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಹಿರಿಯ ಬಾತ್ಮಿದಾರಳಾಗಿ ಕಾರ್ಯ ನಿರ್ವಹಿಸಿದ್ದರು.












Click it and Unblock the Notifications