ಜೆಡೆ ಕೊಲೆ: ಪತ್ರಕರ್ತೆ ಬಂಧನ, ಪ್ರಕರಣಕ್ಕೆ ಹೊಸ ತಿರುವು

ಮುಂಬೈ ಮೂಲದ ಪತ್ರಕರ್ತೆ ಜಿಗ್ನಾ ವೋರಾ ಎಂಬುವರು ಜೆಡೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಭೂಗತ ಪಾತಕಿಗಳಿಗೆ ತಲುಪಿಸಿದ್ದಾರೆ. ಛೋಟಾ ಶಕೀಲ್ ಗ್ಯಾಂಗ್ ಗೆ ಜೆಡೆ ಅವರ ಮನೆ ವಿವರ, ಬೈಕು, ದಿನಚರಿ ವಿವರಗಳನ್ನು ಆಕೆ ತಲುಪಿಸಿದ್ದಾರೆ ಎಂದು ಪೊಲೀಸರು ಹೇಳಿದರು.
ಏಷ್ಯಯನ್ ಏಜ್ ಇಂಗ್ಲೀಷ್ ದಿನಪತ್ರಿಕೆಯಲ್ಲಿ ನ್ಯೂಸ್ ಬ್ಯೂರೋ ಚೀಫ್ ಆಗಿರುವ ಜಿಗ್ನಾ ವೋರಾ ಅವರನ್ನು ಬಂಧಿಸಲಾಗಿದ್ದು, ಜೆಡೆ ಹತ್ಯೆ ಹಿಂದಿನ ಸಂಚನ್ನು ಶೀಘ್ರದಲ್ಲೇ ಪತ್ತೆ ಹಚ್ಚಲಾಗುವುದು ಎಂದು ಜಂಟಿ ಪೊಲೀಸ್ ಆಯುಕ್ತ ಹಿಮಾಂಶು ರಾಯ್ ಹೇಳಿದ್ದಾರೆ.
ದಾವೂದ್ ನ ಬಲಗೈ ಬಂಟ ಛೋಟಾ ಶಕೀಲ್ ಗ್ಯಾಂಗ್ ನ ಶಾರ್ಪ್ ಶೂಟರ್ ಗಳು ಜೂ.11ರಂದು ಪತ್ರಕರ್ತ ಜೆಡೇ ಅವರನ್ನು ನಡು ರಸ್ತೆಯಲ್ಲಿ ಗುಂಡಿಕ್ಕಿ ಕೊಂದಿದ್ದರು.












Click it and Unblock the Notifications