ವಾಲ್ಮಾರ್ಟ್ ಪ್ರವೇಶಕ್ಕೆ ವೀರಪ್ಪ ಮೊಯ್ಲಿ ವಿರೋಧ

ಸಚಿವ ವೀರಪ್ಪ ಮೊಯ್ಲಿ ಹಾಗೂ ಮುಕುಲ್ ವಾಸ್ನಿಕ್ ಹೊರತುಪಡಿಸಿದರೆ ಮನಮೋಹನ್ ಸಿಂಗ್ ಸಚಿವ ಸಂಪುಟದ ಎಲ್ಲಾ ಸದಸ್ಯರು ವಿದೇಶಿಯರನ್ನು ಚಿಲ್ಲರೆ ಅಂಗಡಿ ಮಳಿಗೆಗೆ ಕರೆತರಲು ರೆಡ್ ಕಾರ್ಪೆಟ್ ಸಿದ್ಧ ಮಾಡಿಟ್ಟುಕೊಂಡಿದ್ದಾರೆ.
ಮೂಲಗಳ ಪ್ರಕಾರ ಬಹು ಬ್ರಾಂಡ್‌ನ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಶೇ.51 ವಿದೇಶಿ ನೇರ ಹೂಡಿಕೆಗೆ ಸಂಪುಟ ಅಂಗೀಕಾರ ನೀಡುವ ಸಾಧ್ಯತೆಯಿದೆ.
ವಾಲ್‌ಮಾರ್ಟ್, ಟೆಸ್ಕೊ ಮತ್ತು ಕ್ಯಾರಿಫೋರ್ ಮುಂತಾದ ಜಾಗತಿಕ ಬೃಹತ್ ವ್ಯಾಪಾರ ಸಂಸ್ಥೆಗಳು ಭಾರತದಲ್ಲಿ ತಮ್ಮ ರಿಟೈಲ್ ಮಳಿಗೆಗಳ ಜಾಲ ಆರಂಭಿಸಲು ಸರ್ಕಾರ ಅನುಮು ಮಾಡಕೊಡಲಿದೆ.
ಬಹು ಬ್ರಾಂಡ್ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಶೇ.51ರಷ್ಟು ವಿದೇಶಿ ನೇರ ಹೂಡಿಕೆ ಅನುವು ಮಾಡಿಕೊಡಬಹುದು. ಕೆಲ ಷರತ್ತುಗಳನ್ನು ಪಾಲಿಸಬೇಕಾಗುತ್ತದೆ. ಕನಿಷ್ಠ ಹೂಡಿಕೆ 10 ಕೋಟಿ ಅಮೆರಿಕನ್ ಡಾಲರ್ ಆಗಿರಬೇಕು ಹಾಗೂ ಸ್ಥಳೀಯರನ್ನೇ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಷರತ್ತುಗಳುಳ್ಳ ವರದಿಯನ್ನು ಸಂಪುಟ ಕಾರ್ಯದರ್ಶಿ ಅಜಿತ್ ಕುಮಾರ್ ಸೇಠ್ ನೇತೃತ್ವದ ಸಮಿತಿ, ಸರ್ಕಾರಕ್ಕೆ ನೀಡಿದೆ.












Click it and Unblock the Notifications