ಬೆಂಗಳೂರು ಹೈಟೆಕ್ ವೇಶ್ಯಾವಾಟಿಕೆ: ಮೂವರ ಬಂಧನ

ಅಂತರ್ಜಾಲದಲ್ಲಿ ನೀಡಲಾಗಿದ್ದ ಜಾಹೀರಾತಿಗೆ ಮರುಳಾಗಿ ಮೊಬೈಲ್ ಫೋನ್‌ಗೆ ಕರೆ ಮಾಡಿದ ಗಿರಾಕಿಗಳನ್ನು ವೇಶ್ಯಾವಾಟಿಕೆಗೆ ಆಹ್ವಾನಿಸಲಾಗುತ್ತಿತ್ತು. ರು.5ರಿಂದ 10 ಸಾವಿರಕ್ಕೆ ಹೊರರಾಜ್ಯದ ಒಳ್ಳೆಯ ಹುಡುಗಿಯರಿದ್ದಾರೆ ಎಂದು ತಿಳಿಸಿ, ನಂ.403/37, 13ನೇ ಕ್ರಾಸ್, 16 ಎ ಮೈನ್, ವೆಂಕಟೇಶ್ವರ ಲೇಔಟ್, ಮಡಿವಾಳ, ಬೆಂಗಳೂರು ಈ ವಿಳಾಸ ನೀಡಲಾಗುತ್ತಿತ್ತು.
ಗಿರಾಕಿಗಳಿಂದ ಹಣ ಪಡೆದು ಮೇಲಿನ ವಿಳಾಸದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿತ್ತು. ಈ ಮಾಹಿತಿಯನ್ನು ಸಂಗ್ರಹಿಸಿದ ಮಹಿಳೆ ಮತ್ತು ಮಾದಕದ್ರವ್ಯ ದಳದ ಪೊಲೀಸರು ಕ್ಷಿಪ್ರಕಾರ್ಯಾಚರಣೆ ನಡೆಸಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.
ಹಾಸನ ಜಿಲ್ಲೆ ನಿವಾಸಿ ಎಸ್.ಕೆ. ಶ್ರೀನಿವಾಸ (30), ಹೊಸಕೋಟೆಯ ಎನ್. ಶ್ರೀನಿವಾಸ (39), ಬೆಳಗಾವಿಯ ಕುಮಾರಿ ಆಶಾಷೇಖ್(20) ಎಂಬುವವರುಗಳನ್ನು ದಸ್ತಗಿರಿ ಮಾಡಲಾಗಿದೆ. ಬಂಧಿತರಿಂದ ರು. 17,000 ನಗದು, 3 ಮೊಬೈಲ್ ಫೋನ್‌ಗಳನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಲು ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದ ಆರೋಪಿ ರವಿ ಎಂಬಾತ ತಲೆಮರೆಸಿಕೊಂಡಿದ್ದು, ಈತನ ಪತ್ತೆಕಾರ್ಯ ಮುಂದುವರಿದಿರುತ್ತದೆ. ಈ ಬಗ್ಗೆ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. (ಒನ್‌ಇಂಡಿಯಾ ಕನ್ನಡ)












Click it and Unblock the Notifications