ಸಂತೋಷ್ ಹೆಗ್ಡೆಗೆ ಯಡಿಯೂರಪ್ಪ ಅವರ 4 ಸರಳ ಪ್ರಶ್ನೆಗಳು

ಯಡಿಯೂರಪ್ಪ ಪ್ರಶ್ನೆಗಳು ಇಂತಿವೆ:
1. ಯುವಿ ಸಿಂಗ್ ನೇತೃತ್ವದಲ್ಲಿ ಸಿದ್ಧಪಡಿಸಲಾದ ಅಕ್ರಮ ಗಣಿಗಾರಿಕೆ ವರದಿ ಹೇಗೆ ಹಾಗೂ ಎಲ್ಲಿಂದ ಸೋರಿಕೆಯಾಯಿತು ಎಂಬುದನ್ನು ಬಹಿರಂಗಪಡಿಸಿ.
2. ಟೆಲಿಪೋನ್ ಕದ್ದಾಲಿಕೆ ಆಗಿದೆ ಎಂದು ಆರೋಪಿಸಿದ್ದಿರಿ. ಆದರೆ, ನನ್ನ ರಾಜೀನಾಮೆ ಬಳಿಕವೂ ಸುಮ್ಮನಿದ್ದೀರಿ. ಈಗಲಾದರೂ 6 ಕೋಟಿ ಕನ್ನಡಿಗರ ಮುಂದೆ ಸತ್ಯವನ್ನು ಬಹಿರಂಗಪಡಿಸಬೇಕು.
3. 2002 ರಿಂದ 2010ರವರೆಗೆ ಅಕ್ರಮ ಗಣಿಗಾರಿಕೆ ಹಾಗೂ ಅಕ್ರಮ ಅದಿರು ರಫ್ತು ಕುರಿತು ತನಿಖೆ ನಡೆಸಲು ಸೂಚಿಸಿದ್ದೇ ನಾನು, ವಿನಂತಿ ಮಾಡಿರಲಿಲ್ಲ. ಆದರೆ ನೀವು ಕೃಷ್ಣ ಕಾಲದ ಅಕ್ರಮ ಗಣಿಗಾರಿಕೆಯನ್ನು ಯಾಕೆ ಮುಚ್ಚಿ ಹಾಕಿದಿರಿ?
4. ಉಕ್ಕು ಉದ್ಯಮದಲ್ಲಿರುವ ಸಂಸ್ಥೆಯೊಂದು ನಮ್ಮ ಕುಟುಂಬದ ಪ್ರೇರಣಾ ಸಂಸ್ಥೆಗೆ 10 ಕೋಟಿ ರೂ. ದೇಣಿಗೆ ನೀಡಿದ್ದನ್ನೇ ಆ ಸಂಸ್ಥೆಗೆ ಸಹಕರಿಸಲು ಹಣ ಪಡೆದಿದ್ದೀರಿ ಎಂದು ಆರೋಪಿಸಿದ್ದಾರೆ. ನ್ಯಾ. ಹೆಗ್ಡೆ ಅವರೇ ಇದನ್ನು ದಾಖಲೆಯೊಂದಿಗೆ ಸಾಬೀತುಪಡಿಸಿ.












Click it and Unblock the Notifications