ಮಲೆಯಾಳಿಗಳ ನಿದ್ದೆಗೆಡಿಸುತ್ತಿರುವ ಮಲೇಷ್ಯಾದ ಸೆಕ್ಸ್ ಸರಕು

ಮಲೇಷ್ಯಾದ ಕಂಪನಿಗಳು ತಯಾರಿಸುತ್ತಿರುವ ಜೆಲ್, ನೊರೆ, ಗಿಡಮೂಲಿಕೆ ಗುಳಿಗೆ, ಶಿಷ್ನ ನಿಮಿರುವಿಕೆಯಂತಹ ಔಷಧಿ ಮತ್ತು ಷಂಡತ್ವ ನಿವಾರಕ ಔಷಧಿಗಳು ದೇವರ ನಾಡಿನಲ್ಲಿ ಬೆಡ್ ರೂಂ ಪ್ರವೇಶಿಸುತ್ತಿವೆ.
ಗುಪ್ತಾಂಗಳ ಮೇಲೆ ಸವರಬಹುದಾದ ಕ್ರೀಮ್, ಜೆಲ್ ಮುಂತಾದವನ್ನು ಮಲೇಷ್ಯಾದ ಸೆಲಾಂಗೊರಿನಲ್ಲಿ ಹೆಚ್ಚಾಗಿ ಉತ್ಪಾದಿಸಲಾಗುತ್ತಿದೆ. ಕುತೂಹಲದ ಸಂಗತಿಯೆಂದರೆ ಇವುಗಳನ್ನು ಯಾರು, ಎಲ್ಲಿ, ಹೇಗೆಲ್ಲ ಮಾರಾಟ ಮಾಡುತ್ತಿದ್ದಾರೆ ಎಂಬುದು ಸ್ಥಳೀಯ ಆಡಳಿತಕ್ಕೆ ರಹಸ್ಯವಾಗಿ ಉಳಿದಿದೆ. ಬಹುಸ್ತರಗಳಲ್ಲಿ ಬಹುವಲಯಗಳಲ್ಲಿ ಯಾರಿಗೂ ಅನುಮಾನ ಬಾರದಂತೆ ಇವುಗಳ ಮಾರಾಟ ಯಾವುದೇ ಎಗ್ಗಿಲ್ಲದೆ ಜನರ ಮಧ್ಯೆಯೇ ನಡೆಯುತ್ತಿದೆ.
ಹೆಚ್ಚು ಹೆಚ್ಚು ಸುಖ ಬಯಸುವ ಶ್ರೀಮಂತ ವರ್ಗದ ಜನರೇ ಇದರ ಫಲಾನುಭವಿಗಳು ಎನ್ನಲಾಗಿದೆ. ಈ ಸೆಕ್ಸ್ ಸಾಮಾನುಗಳು ದುಬಾರಿಯಾಗಿದ್ದರೂ ಹಿಂದೆಮುಂದೆ ನೋಡದೆ ಇವರು ಖರೀದಿಗೆ ನಿಲ್ಲುತ್ತಿದ್ದಾರೆ. ಉದಾಹರಣೆಗೆ ಸೆಕ್ಸ್ ಅನ್ನು ಹೆಚ್ಚಿಸುವ ಎಂಟು ಗ್ರಾಂ ಜೆಲ್ ಗೆ 3,000 ರುಪಾಯಿ ಬೆಲೆಯಿದೆ. ಕಾಸ್ಮೆಟಿಕ್ಸ್ ವಸ್ತುಗಳ ಮಧ್ಯೆ ಗುಪ್ತವಾಗಿ ಇವು ಗ್ರಾಹಕರ ಕೈಸೇರುತ್ತಿದೆ.












Click it and Unblock the Notifications