ಬಿಎಸ್ ವೈಗೆ ಕಟ್ಟ ಕಡೆಯ ಎಚ್ಚರಿಕೆ ನೀಡಿದ ಶ್ರೀರಾಮುಲು

ಬಾಯಿಗೆ ಬಂದಂತೆ ಮಾತನಾಡುವುದನ್ನು ಮುಂದುವರೆಸಿದರೆ, ಪರಿಣಾಮ ಎದುರಿಸಬೇಕಾಗುತ್ತದೆ. ಸದ್ಯಕ್ಕೆ ಅವರಿಗೆ ನಮ್ಮ ಬಳ್ಳಾರಿ ಜನತೆ ತಕ್ಕ ಉತ್ತರ ನೀಡಲಿದ್ದಾರೆ. ಇದು ನನ್ನ ಅಂತಿಮ ಎಚ್ಚರಿಕೆ ಎಂದು ಮಾಜಿ ಸಚಿವ, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಬಿ. ಶ್ರೀರಾಮುಲು ಹೇಳಿದ್ದಾರೆ.
ಬಳ್ಳಾರಿ ತಾಲೂಕಿನ ಜಾನೆಕುಂಟೆ, ಬೆಳಗಲ್ಲು, ಹರಗಿನದೋಣಿ, ಕೊಳಗಲ್ಲು ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮಂಗಳವಾರ(ನ.22) ಶ್ರೀರಾಮುಲು ಅವರು ಪ್ರಚಾರ ನಡೆಸಿದರು.
ಬಿಜೆಪಿಯಲ್ಲಿದ್ದಾಗ ಎಲ್ಲದ್ದಕ್ಕೂ ನಾವೇ ಬೇಕಾಗಿತ್ತು. ಪಕ್ಷ ತೊರೆದ ಮೇಲೆ ಈಶ್ವರಪ್ಪ ಆದಿಯಾಗಿ ಎಲ್ಲರೂ ನಮ್ಮನ್ನು ದೂರುತ್ತಿದ್ದಾರೆ. ವರ್ತೂರು ಪ್ರಕಾಶ್ ಅವರು ನೀಡಿದ ಹೇಳಿಕೆಯಂತೂ ಅಕ್ಷಮ್ಯ.
ಪ್ರಚಾರಕ್ಕೆ ಜನ ದೊರೆಯುತ್ತಿಲ್ಲ ಎಂದು ಬಿಜೆಪಿ ಮುಖಂಡರು ಬೇರೆ ಕಡೆಯಿಂದ ಜನರನ್ನು ಕರೆ ತಂದಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಚುನಾವಣಾ ಅಕ್ರಮಗಳ ಬಗ್ಗೆ ಚುನಾವಣಾಧಿಕಾರಿ ಸೆಂಥಿಲ್ ಅವರಿಗೆ ದೂರು ನೀಡಲಾಗುವುದು ಎಂದು ಶ್ರೀರಾಮುಲು ಹೇಳಿದರು.












Click it and Unblock the Notifications