ರೆಡ್ಡಿ ಕಥೆ ಮುಗಿಯಿತು: ಐಎಎಸ್ ಅಧಿಕಾರಿಯೇ ಮಾಫಿ ಸಾಕ್ಷಿ

ಘಟಾನುಘಟಿ ಹಿರಿಯ ಅಧಿಕಾರಿಯನ್ನೇ ಮಾಫಿ ಸಾಕ್ಷಿಯನ್ನಾಗಿ ಪರಿವರ್ತಿಸಿಕೊಳ್ಳುವಲ್ಲಿ ಸಿಬಿಐ ಜಂಟಿ ನಿರ್ದೇಶಕ ವಿವಿ ಲಕ್ಷ್ಮಿನಾರಾಯಣ ಯಶಸ್ಸು ಸಾಧಿಸಿದ್ದಾರೆ. ಡಿಸೆಂಬರ್ 4ಕ್ಕೆ ಭರ್ಜರಿ ದಾಖಲೆಗಳೊಂದಿಗೆ ದೋಷಾರೋಪಟ್ಟಿ ದಾಖಲಿಸಲು ಅವರು ಸಜ್ಜಾಗಿದ್ದಾರೆ.
ಕಳೆದ ಅಕ್ಟೋಬರ್ ನಲ್ಲಿಯೇ ರೆಡ್ಡಿ ವಿರುದ್ಧ ಆರೋಪಪಟ್ಟಿ ದಾಖಲಿಸಲು ಸಿಬಿಐ ಯತ್ನಿಸಿದಾಗ 'ಇದುವರೆಗೆ ಸಲ್ಲಿಸಿರುವುದು ಸರಿಯಾಗಿಯೇ ಇದೆ. ಇನ್ನಷ್ಟು ಚುರುಕಾಗಿ ತನಿಖೆ ನಡೆಸಿ ಸಮಗ್ರ ವರದಿ ಸಲ್ಲಿಸಿ' ಎಂದು ವಿಶೇಷ ನ್ಯಾಯಾಲಯವೇ ಸಿಬಿಐಗೆ ಸೂಚಿಸಿತ್ತು. ಈಗ ಒಬ್ಬರಲ್ಲ ಇಬ್ಬರು ಮಾಫಿ ಸಾಕ್ಷ್ಯನೀಡಲು ಮುಂದಾಗಿದ್ದಾರೆ. ಇದರಿಂದ ಸಿಬಿಐ ರಣೋತ್ಸಾಹದಲ್ಲಿದ್ದು, ಜನಾರ್ದನ ರೆಡ್ಡಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಲು ಸಕಲ ಸಿದ್ಧತೆ ನಡೆಸಿದೆ.
ರೆಡ್ಡಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮೂವರು ಆಪಾದಿತರು ಈಗಾಗಲೇ ಜೈಲುಪಾಲಾಗಿದ್ದಾರೆ. ನಾಲ್ಕನೆಯ ಆಪಾದಿತೆ ಆಂಧ್ರ ಪ್ರದೇಶದ ಗಣಿ ಇಲಾಖೆಯ ಮಾಜಿ ಕಾರ್ಯದರ್ಶಿ ಶ್ರೀಲಕ್ಷ್ಮಿ, ಐಎಎಸ್, ಅವರು ಸಿಬಿಐ ಜಂಟಿ ನಿರ್ದೇಶಕ ವಿವಿ ಲಕ್ಷ್ಮಿನಾರಾಯಣ ಅವರ ಮುಂದೆ ಪ್ರಥಮ ಬಾರಿಗೆ ಹಾಜರಾಗಿ ಮಾಫಿ ಸಾಕ್ಷಿಯಾಗಲು ಒಪ್ಪಿಗೆ ನೀಡಿದ್ದಾರೆ. ಶ್ರೀಲಕ್ಷ್ಮಿ ಅವರ ಪಾಸ್ ಪೋರ್ಟ್ ಅನ್ನು ಸಿಬಿಐ ಮುಟ್ಟುಗೋಲು ಹಾಕಿಕೊಂಡಿದೆ. ಶ್ರೀಲಕ್ಷ್ಮಿ ಪ್ರಸ್ತುತ ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅದೇ ರೀತಿ ಈಗ ಸಿಬಿಐ ವಶದಲ್ಲಿರುವ ಸರ್ಕಾರಿ ಖನಿಜ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ರಾಜಗೋಪಾಲ್ ಸಹ ಮಾಫಿ ಸಾಕ್ಷಿಯಾಗಲು ಒಪ್ಪಿಕೊಂಡು ತನಿಖೆಗೆ ಸಹಕರಿಸುತ್ತಿದ್ದಾರೆ.












Click it and Unblock the Notifications