ಹೆಚ್ಚು ಊಟಕ್ಕೆ ಬೇಡಿಕೆ ಮಂಡಿಸಿದ ಅಜ್ಮಲ್ ಕಸಬ್

Ajmal Kasab
ಮುಂಬೈ, ನ.22: 26/11 ರ ಮುಂಬೈ ಉಗ್ರರ ದಾಳಿಯಲ್ಲಿ ಬದುಕುಳಿದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಸಾಕಲು ಇದುವರೆವಿಗೂ 16.17 ಕೋಟಿ ರೂ ವೆಚ್ಚವಾಗಿದೆ ಎಂದು ಮಹಾರಾಷ್ಟ್ರ ಸರ್ಕಾರದ ಮೂಲಗಳಿಂದ ತಿಳಿದು ಬಂದಿದೆ.

ಮುಂಬೈನ ಆರ್ಥರ್ ರಸ್ತೆಯ ಜೈಲಿನಲ್ಲಿರುವ ಪಾಕ್ ಮೂಲದ ಉಗ್ರ ಕಸಬ್ ದೇಖಾರೇಖಿಗಾಗಿ ಇಂಡೋ ಟಿಬೇಟಿನ್ ಬಾರ್ಡರ್ ಪೊಲೀಸ್ ಕರೆಸಲಾಗಿದೆ. ವಿಶೇಷ ಸೆಲ್ ನಿರ್ಮಿಸಲಾಗಿದೆ.

ವಿಶೇಷ ಊಟೋಪಾಚರ, ಸುರಕ್ಷತೆ, ಚಿಕಿತ್ಸೆ ಅಲ್ಲದೆ ವಿಶೇಷ ಸರ್ಕಾರಿ ಅಭಿಯೋಜಕ(public prosecutor) ರಿಗೆ ನೀಡಬೇಕಾದ ವೆಚ್ಚ ಎಲ್ಲವನ್ನು ಮಹಾರಾಷ್ಟ್ರ ಸರ್ಕಾರ ಭರಿಸುತ್ತಿದೆ.

2008 ರಿಂದ ಕಸಬ್ ಗೆ ನೀಡಿರುವ ವೈದ್ಯಕೀಯ ಚಿಕಿತ್ಸಾ ವೆಚ್ಚವೇ 26,953 ರೂ ಆಗಿದೆ. 27, 520 ರೂ ಆಹಾರ ವೆಚ್ಚ, 5.29 ಕೋಟಿ ರು ವಿಶೇಷ ಕಟ್ಟಡ ನಿರ್ಮಾಣ, 10.87 ಕೋಟಿ ರು ಐಟಿಬಿಪಿ ಸಿಬ್ಬಂದಿ ನೇಮಕ,26, 953 ರೂ ಇತರೆ ವೆಚ್ಚ ಇದರಲ್ಲಿ ಸೇರಿದೆ.

25 ರೂ ಪ್ರತಿ ದಿನದ ಊಟ ಖರ್ಚು ಮಾಡಲಾಗುತ್ತಿದ್ದು, ಪ್ರತಿ ದಿನ ಹೆಚ್ಚಿನ ಊಟಕ್ಕೆ ಕಸಬ್ ಆಗ್ರಹಿಸುತ್ತಿದದಾನೆ. ಆದರೆ, ಈಗ ನೀಡುತ್ತಿರುವ ಸೌಲಭ್ಯದಲ್ಲಿ ಯಾವುದೇ ಬದಲಾವಣೆಗಳಿಲ್ಲ ಮಾಡುತ್ತಿಲ್ಲ ಎಂದು ಸರ್ಕಾರಿ ಮೂಲಗಳು ಹೇಳಿದೆ.

ಮುಂಬೈ ಉಗ್ರರ ದಾಳಿಯಲ್ಲಿ ನೂರಕ್ಕೂ ಅಧಿಕ ಮಂದಿ ಸಾವಿಗೆ ಕಾರಣನಾದ ಕಸಬ್ ಗೆ ವಿಶೇಷ ಕೋರ್ಟ್‌ ಕಳೆದ ವರ್ಷ ಮೇ 6ರಂದು ಆತನಿಗೆ ಮರಣದಂಡನೆ ವಿಧಿಸಿತ್ತು. ಬಾಂಬೆ ಹೈಕೋರ್ಟ್‌ ಕಳೆದ ಫೆ. 21ರಂದು ಶಿಕ್ಷೆಯನ್ನು ಎತ್ತಿಹಿಡಿದಿತ್ತು. ಆದರೆ, ಸುಪ್ರೀಂಕೋರ್ಟ್ ಮರಣದಂಡನೆಗೆ ತಡೆಯಾಜ್ಞೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+