ಹಳ್ಳಿಹಳ್ಳಿಗೆ ಅಡಿಡಾಸ್ ಶೂ, 50 ರೂಪಾಯಿಗೆ ಒಂದು

Adidas to Launch 1 Dollar Shoe in India
ಬರ್ಲಿನ್, ನ.21: ಸ್ಪೋರ್ಟ್ಸ್ ವೇರ್ ಮತ್ತು ಕ್ರೀಡಾ ಸಾಮಗ್ರಿಗಳ ತಯಾರಿಕೆಯ ಅಗ್ರಗಣ್ಯ ಅಡಿಡಾಸ್ ಕಂಪನಿ ಇದೀಗ ಭಾರತದಲ್ಲಿ 1 ಡಾಲರ್ ಗೆ ಶೂಗಳನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದೆ.

ಇದೇ ಯೋಜನೆಯನ್ನು ಬಾಂಗ್ಲಾದೇಶದಲ್ಲಿ ಪ್ರಯತ್ನಿಸಿ ವಿಫಲಗೊಂಡಿದ್ದರೂ ಸಹ, ಬೆಳೆಯುತ್ತಿರುವ ಭಾರತೀಯ ಮಾರುಕಟ್ಟೆಯಲ್ಲಿ ಈ ಯೋಜನೆ ಯಶಸ್ವಿಯಾಗಲಿದೆ ಎಂದು ಕಂಪನಿ ಸಿಇಒ ಹರ್ಬರ್ಟ್ ಹೇನರ್ ಡೈ ವೆಲ್ಟ್ ಆಮ್ ಸಾನ್ಟಾಗ್ ಪತ್ರಿಕೆಯಲ್ಲಿ ತಿಳಿಸಿದ್ದಾರೆ..

ಈ 50 ರೂಪಾಯಿಯ ಶೂಗಳನ್ನು ತಮ್ಮ ಜಾಲಗಳ ಮೂಲಕ ಹಳ್ಳಿ ಹಳ್ಳಿಗಳಲ್ಲೂ ಪರಿಚಯಿಸುವುದಾಗಿ ತಿಳಿಸಿದ್ದಾರೆ. ಆದರೆ ಈ ಶೂಗಳನ್ನು ಯಾವಾಗ ಎಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿಲ್ಲ. 2010 ರಲ್ಲಿ ಇದೇ ರೀತಿ ಒಂದು ಡಾಲರ್ ಶೂಗಳನ್ನು ಬಾಂಗ್ಲಾದೇಶದಲ್ಲಿ ಮಾರಾಟ ಮಾಡಿದ್ದು, ಉದ್ದೇಶದಂತೆ ಯಶಸ್ವಿಯಾಗಲಿಲ್ಲ ಎಂದೂ ತಿಳಿಸಿದ್ದಾರೆ.

ಪರೀಕ್ಷಾರ್ಥವಾಗಿ 5,000 ಜೊತೆಯ ಶೂಗಳನ್ನು ಮಾರಾಟ ಮಾಡಿದ್ದೆವು. ಆದರೆ ನಷ್ಟ ಅನುಭವಿಸಬೇಕಾಯಿತು, ಒಂದು ಜೋಡಿ ಶೂ ತಯಾರಿಸಲು 3 ಡಾಲರ್ ಖರ್ಚಾಗುತ್ತದೆ ಮತ್ತು ಇದರ ರಫ್ತಿಗೆ 3.50 ಡಾಲರ್ ನೀಡಬೇಕಾಗುತ್ತದೆ ಎಂದಿದ್ದಾರೆ.

ಕಂಪನಿಯ ಆದಾಯ 10 ರಿಂದ 12 ಶೇಕಡಾ ಹೆಚ್ಚಾಗಿದ್ದು, ಕಂಪನಿ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಇಡೀ ವಿಶ್ವವೇ ಮಾತಾಡುತ್ತಿದೆ ಎಂದು ಹೇನರ್ ಸಂತಸ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+