ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆನ್ನ ಹಿಂದೆ ಕತ್ತಿ ಮಸೆಯೋರನ್ನ ಸುಮ್ನೆ ಬಿಡಲ್ಲ: ಬಿಎಸ್ ವೈ

By Mahesh
|
Google Oneindia Kannada News

BS yeddyurappa
ಬೆಂಗಳೂರು, ನ.19: ಯಡಿಯೂರಪ್ಪ ಎಲ್ಲಿದ್ದರೂ ಅವರ ಪ್ರಭಾವ ಕುಗ್ಗಿಲ್ಲ. ನಮ್ಮದೇನಿದ್ದರೂ ಸಾಮೂಹಿಕ ನಾಯಕತ್ವ ಎಂದು ಬಿಜೆಪಿ ಎಷ್ಟೇ ಸಾರಿ ಕೂಗಿ ಹೇಳಿದರೂ ಯಡಿಯೂರಪ್ಪ ಇಲ್ಲದ ಪಕ್ಷದ ಊಹಿಸಲು ಸಾಧ್ಯವಿಲ್ಲ.

ಬಳ್ಳಾರಿ ಪ್ರಚಾರಕ್ಕೆ ಹೋಗಲು ಒಪ್ಪಿಕೊಂಡ ನಂತರ ಯಡಿಯೂರಪ್ಪ ಅವರು ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ವಿಸ್ತಾರವಾಗಿ ಹೇಳಿಕೊಂಡಿದ್ದಾರೆ.

38 ತಿಂಗಳು ಸಿಎಂ ಪಟ್ಟ ಧರಿಸಿದ್ದ ಬಿಎಸ್ ಯಡಿಯೂರಪ್ಪ 24 ದಿನ ಜೈಲುವಾಸ ಅನುಭವಿಸಿ ಬಂದಿದ್ದಾರೆ. ಈ ಸಂದರ್ಭದಲ್ಲಿ ಯಡಿಯುರಪ್ಪ ಅವರ ಬೆಂಬಲಿಗರ ಬಗ್ಗೆ ಚರ್ಚೆ ಆರಂಭವಾಗಿದೆ.

ಪ್ರಶ್ನೆ:ನಿಮ್ಮನ್ನು ರಾಜಕೀಯವಾಗಿ ಮುಗಿಸಲು ಯತ್ನಿಸಿದ್ದು ಯಾರು? ನಿಮ್ಮ ಪಕ್ಷದವರೇನಾ? ಅಥವಾ ವಿಪಕ್ಷಗಳಾ?
ಬಿಎಸ್ ವೈ: ನಿಮ್ಮ ಮಾತು 100ಕ್ಕೆ ನೂರು ಸತ್ಯ. ಆಂತರಿಕ ಬಿಕ್ಕಟ್ಟು, ಬೆನ್ನ ಹಿಂದೆ ಕತ್ತಿ ಮಸೆಯುವವರು ನಮ್ಮಲ್ಲಿ ಅಧಿಕವಾಗಿದ್ದಾರೆ. ವಿಪಕ್ಷಗಳಿಗಿಂತ ಪಕ್ಷದವರಿಂದಲೇ ನನಗೆ ಅಪಾಯ ಜಾಸ್ತಿ.

ಪ್ರಶ್ನೆ: ಉತ್ತಮ ಆಡಳಿತ ಹಾಗೂ ಭ್ರಷ್ಟಾಚಾರ ಜೊತೆಜೊತೆಗಿರಲು ಸಾಧ್ಯವಿಲ್ಲ ಎಂದು ಎಲ್ ಕೆ ಅಡ್ವಾಣಿ ಹೇಳಿದಾಗ ನಿಮಗೆ ಏನ್ನನಿಸಿತು?
ಬಿಎಸ್ ವೈ: ನಾನು ಆಗ ನ್ಯಾಯಾಂಗ ಬಂಧನದಲ್ಲಿದ್ದೆ. ಅಡ್ವಾಣಿ ಹೇಳಿಕೆಯಿಂದ ತೀವ್ರವಾಗಿ ಮನನೊಂದೆ. ಎಲ್ ಕೆ ಅಡ್ವಾಣಿ ಹಾಗೂ ಎಬಿ ವಾಜಪೇಯಿ ಮೇಲೆ ನನಗೆ ಅಪಾರ ಗೌರವವಿದೆ. ಇಬ್ಬರು ನನಗೆ ಜ್ಞಾನ ನೇತ್ರಗಳಿದ್ದ ಹಾಗೆ. ಈ ಬಾರಿ ವೈಷ್ಣೋದೇವಿಗೆ ಹೋಗುವಾಗ ಅಡ್ವಾಣಿಯನ್ನು ಭೇಟಿ ಮಾಡಿ ಮಾತಾಡುತ್ತೇನೆ. ಅವರ ರಥಯಾತ್ರೆ ಕಾರ್ಯಕ್ರಮ ನನಗೆ ಆಶ್ಚರ್ಯ ತಂದಿದೆ.

ಪ್ರಶ್ನೆ:ಅಡ್ವಾಣಿ ಹೇಳಿಕೆ, ಬಿಜೆಪಿ ಬಿಕ್ಕಟ್ಟು, ಜೈಲುವಾಸ, ಚುನಾವಣೆ ಬಗ್ಗೆ ಹೇಳಿ?
ಬಿಎಸ್ ವೈ: ಆರೋಪ ಬಂದಾಗ ಅದನ್ನು ನ್ಯಾಯವಾದ ರೀತಿಯಲ್ಲಿ ಎದುರಿಸಿ ಎಲ್ಲದರಲ್ಲೂ ಜಾಮೀನು ಪಡೆದಿದ್ದೇನೆ.

ನನ್ನ ಕಂಡರೆ ಆಗದವರು ಅಡ್ವಾಣಿ ಕಿವಿಯೂದಿದ್ದಾರೆ. 2008ರಲ್ಲಿ ಕೊಪ್ಪಳದಲ್ಲಿ ಡೆಫಾಸಿಟ್ ಕಳೆದುಕೊಂಡಿದ್ದೆವು. ಚನ್ನಪಟ್ಟಣ ಹಾಗೂ ಬಂಗಾರಪೇಟೆಯಲ್ಲಿ ಕೇಸರಿ ಬಾವುಟ ಎಲ್ಲಿತ್ತು.

ಜನ ನನ್ನ ಮೇಲೆ ವಿಶ್ವಾಸವಿಟ್ಟಿದ್ದರಿಂದಲೇ ಕಾಂಗ್ರೆಸ್, ಜೆಡಿಎಸ್ ವಶದಲ್ಲಿದ್ದ ಕೊಪ್ಪಳ, ಚನ್ನಪಟ್ಟಣ ಹಾಗೂ ಬಂಗಾರಪೇಟೆ ನಮ್ಮ ಕೈವಶವಾಗಿದೆ.

ನನ್ನ ಬಗ್ಗೆ ಕೇಂದ್ರ ನಾಯಕರಿಗೆ ಇಲ್ಲಸಲ್ಲದನ್ನು ಹೇಳಿದ್ದು ಯಾರೂ ಎಂದು ತಿಳಿದಿದೆ. ಮುಂದಿನ ದಿನಗಳಲ್ಲಿ ಅವರ ಪರಿಸ್ಥಿತಿ ಏನಾಗಲಿದೆ ಎಂದು ನೀವು ನೋಡುವಿರಿ

English summary
BS Yeddyurappa has declined reports that he is trying to get in to Nitin Gadkari's team. BSY said his aim is to get BJP maximum seats in the next elections. But. He agreed crisis in BJP and sees a bigger threat within the party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X