ಶ್ರೀರಾಮುಲು ಫ್ಯಾನ್ ಗಾಳಿಗೆ ಒಡ್ಡಿದ ದೀಪದಂತೆ ಬಿಜೆಪಿ ಗತಿ!

swabhimani-reddy-brothers-defeat-bjp-siddaramaiah
ಬೆಂಗಳೂರು, ನ.18: ಸ್ವತಂತ್ರ ಅಭ್ಯರ್ಥಿ ಬಿ. ಶ್ರೀರಾಮುಲು ಬಳ್ಳಾರಿ ಗ್ರಾಮಾಂತರ ಉಪಚುನಾವಣೆ ಗೆದ್ದರೆ ಬಿಜೆಪಿ ಗತಿ (ಸೀಲಿಂಗ್ ಫ್ಯಾನ್) ಗಾಳಿಗೊಡ್ಡಿದಾ ದೀಪದಂತೆ ಆಗುತ್ತದಂತೆ! ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೀಗಂತ ಭವಿಷ್ಯ ನುಡಿದಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿನ ಶ್ರೀರಾಮುಲು ಮತ್ತು ಗಾಲಿ ಜನಾರ್ದನ ರೆಡ್ಡಿ ಆಪ್ತ ಶಾಸಕರು ಪಕ್ಷ ತೊರೆದರೆ ಸರಕಾರಕ್ಕೆ ಆಪತ್ತು ತಪ್ಪಿದಲ್ಲ. ಬಳ್ಳಾರಿ ಚುನಾವಣೆಯಲ್ಲಿ ರಾಮುಲು ಗೆದ್ದರೆ ರಾಜ್ಯ ಬಿಜೆಪಿ ಸರಕಾರದ ಭವಿಷ್ಯ ಡೋಲಾಯಮಾನವಾಗಲಿದೆ ಎಂದು ಸಿದ್ದರಾಮಯ್ಯ ಎಂದು ಹೇಳಿದರು.

ನ. 22ರಿಂದ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಮ್ ಪ್ರಸಾದ್ ಪರ ಪ್ರಚಾರ ಕಾರ್ಯದಲ್ಲಿ ತಾನು ಹಾಗೂ ಪಕ್ಷದ ಹಿರಿಯ ಮುಖಂಡರು ಪಾಲ್ಗೊಳ್ಳಲಿದ್ದೇವೆ. ಬಳ್ಳಾರಿ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಯಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಭಾರೀ ಮತಗಳ ಅಂತರದಿಂದ ಜಯ ಗಳಿಸಲಿದ್ದಾರೆ ಎಂದೂ ಸಿದ್ಧರಾಮಯ್ಯ ನುಡಿದರು.

ಬಳ್ಳಾರಿಯಲ್ಲಿ ಬಿಜೆಪಿ ಹಾಗೂ ರೆಡ್ಡಿ ಸಹೋದರರ ವರ್ಚಸ್ಸು ಕುಂದಿದ್ದು, ಶ್ರೀರಾಮುಲು ಬಗ್ಗೆ ಬಳ್ಳಾರಿ ಜನರಿಗೆ ಬೇಸರವಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗಲಿದೆ. ಅಲ್ಲದೆ ಪಕ್ಷದ ಅಭ್ಯರ್ಥಿ ರಾಮ್ ಪ್ರಸಾದ್ ಗೆಲುವಿಗೆ ಹೆಚ್ಚಿನ ಅವಕಾಶಗಳಿವೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+