ಭೂ ಹಗರಣ: ಸಚಿವ ಸೋಮಣ್ಣ ವಿರುದ್ಧ ತನಿಖೆ?

1993ರಲ್ಲಿ ಬಿಡಿಎ ಸ್ವಾದೀನಪಡಿಸಿಕೊಂಡಿದ್ದ ಜಮೀನನ್ನು 2005ರಲ್ಲಿ ಸೋಮಣ್ಣ ಅವರ ಪತ್ನಿ ಶೈಲಜಾ ಹೆಸರಿನಲ್ಲಿ ನಾಗದೇವನಹಳ್ಳಿಯಲ್ಲಿ 22 ಗುಂಟೆ ಎಕರೆ ಜಮೀನು ಖರೀದಿಸಲಾಗಿತ್ತು. 2009ರಲ್ಲಿ ಯಡಿಯೂರಪ್ಪ ಅವರು ಈ ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಲಾಗಿದೆ ಎಂದು ರವಿಕೃಷ್ಣಾ ರೆಡ್ಡಿ ಎಂಬುವವರು ಲೋಕಾಯುಕ್ತಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.
ಖಾಸಗಿ ದೂರಿನ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಧೀಶ ಎನ್.ಕೆ. ಸುಧೀಂದ್ರರಾವ್ ಅವರು ಶೈಲಜಾ, ವಿ. ಸೋಮಣ್ಣ ಹಾಗೂ ಯಡಿಯೂರಪ್ಪ ವಿರುದ್ಧ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸುವ ಸಾಧ್ಯತೆಯಿದೆ.
ಪ್ರಕರಣದ ಮುಂದಿನ ವಿಚಾರಣೆ ನ.21ಕ್ಕೆ ಮುಂದೂಡಲಾಗಿದೆ. ಸೋಮಣ್ಣ ಅವರ ಪುತ್ರರಾದ ಅರುಣ್ ಸೋಮಣ್ಣ, ನವೀನ್ ಸೋಮಣ್ಣ ಮತ್ತಿತರರು ಪಾಲುದಾರರಾಗಿ ಮಾತಾ ಮಿನರಲ್ಸ್ ಎಂಬ ಗಣಿ ಕಂಪನಿ ತುಮಕೂರಿನಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದೆ ಎಂದು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖವಾಗಿದೆ.












Click it and Unblock the Notifications