ಕಾಪಿ ಚಟ್ ತಡೆಯಲು ಬಟಾಬಯಲಲ್ಲಿ ಪರೀಕ್ಷೆ!

ಈ ರೀತಿಯ ಕಟ್ಟುನಿಟ್ಟಿನ ಕ್ರಮದ ಹೊರತಾಗಿಯೂ ಕಿಡಿಗೇಡಿ ವಿದ್ಯಾರ್ಥಿಗಳು ನಕಲು ಮಾಡುವುದಕ್ಕೆ ಪ್ರಯತ್ನಿಸಬಹುದು ಎಂದು ಮುನ್ನೆಚ್ಚರಿಕೆ ವಹಿಸಿದ ಟೀಚರುಗಳು ಮೈದಾನದ ಸುತ್ತ ಇದ್ದ ಎತ್ತರದ ಗುಡ್ಡದ ಮೇಲೆ ನಿಂತು 'ನಕಲು ದುಸ್ಸಾಹಸಕ್ಕೆ ಕೈಹಾಕಬಹುದಾದ ವಿದ್ಯಾರ್ಥಿಗಳ' ಮೇಲೆ ಕಣ್ಣಿಟ್ಟಿದ್ದಾರೆ.
ಅಷ್ಟೇ ಅಲ್ಲದೆ, ಇದಕ್ಕೆ ಸಾಕಷ್ಟು ಪ್ರಚಾರ ಸಿಗುವಂತೆ ನೋಡಿಕೊಂಡಿರುವ ಶಾಲೆ ನಕಲು ದುಸ್ಸಾಹಸಕ್ಕೆ ಕೈಹಾಕುವ ವಿದ್ಯಾರ್ಥಿಗಳಿಗೆ ಕಟ್ಟೆಚ್ಚರವನ್ನೂ ರವಾನಿಸಿದೆ.
'ಇದರಿಂದ ಪಕ್ಕದ ವಿದ್ಯಾರ್ಥಿಯ ಉತ್ತರ ಪತ್ರಿಕೆಯನ್ನು ಕದ್ದುಮುಚ್ಚಿ ನೋಡುವುದು, ಅಥವಾ ಸಣ್ಣ ದನಿಯಲ್ಲಿ ಪಿಸುಗುಟ್ಟುತ್ತಾ ನಕಲು ಮಾಡುವುದಕ್ಕೆ ಪ್ರಯತ್ನಿಸುವುದನ್ನು ತಪ್ಪಿಸಬಹುದು. ಮೈದಾನ ವಿಶಾಲವಾಗಿರುದರಿಂದ ಅವರನ್ನು ದೂರ ದೂರ ಕೂಡಿಸಿ ಪರೀಕ್ಷೆ ಬರೆಸಬಹುದು. ತಪ್ಪು ದಾರಿಗೆ ಹೋಗುವುದನ್ನು ತಡೆಯುವ ನಿಟ್ಟಿನಲ್ಲಿ ಇದು ಅತ್ಯುತ್ತಮ ಪ್ರಯತ್ನ' ಎಂದು ಶಾಲಾ ಆಡಳಿತ ಮಂಡಳಿ ಹೇಳಿದೆ.












Click it and Unblock the Notifications