ಜನಾರ್ದನ ರೆಡ್ಡಿ ತಿಮ್ಮಪ್ಪನ ಅವಕೃಪೆಗೆ ಒಳಗಾಗಿದ್ದು ಹೇಗೆ ?

ದಾಖಲಾರ್ಹ ಸಂಗತಿಯೆಂದರೆ ಇದುವರೆಗೆ ತಿಮ್ಮಪ್ಪನ ಸನ್ನಿಧಾನಕ್ಕೆ ಹರಿದುಬಂದಿರುವ ಬೆಲೆಬಾಳುವ ಕಾಣಿಕೆಗಳ ಪೈಕಿ ಯಾವುದರ ಮೇಲೂ ಕೊಡುಗೈದಾನಿಗಳ ಹೆಸರು ಮುದ್ರಿಸಿಲ್ಲ! ಆದರೆ, 13,000 ಸಾವಿರ ವಜ್ರಗಳಿರುವ ಈ ಕಿರೀಟದಲ್ಲಿ ಇಂದಿಗೂ G ಅಕ್ಷರ ಫಳಫಳಿಸುತ್ತಿದೆ.
ಇದನ್ನೆಲ್ಲ ಅರಿತಿದ್ದ ಹಿತೈಶಿಗಳು ಕಾಣಿಕೆಯ ಮೇಲಿರುವ ತಮ್ಮ ಹೆಸರನ್ನು ತೆಗೆಸಿ ಎಂದು ಇನ್ನಿಲ್ಲದಂತೆ ರೆಡ್ಡಿಗಾರುಗೆ ಹೇಳಿದರು. ಆದರೆ ಒಮ್ಮೆ ಸಮರ್ಪಿಸಿದ ಕಾಣಿಕೆಯನ್ನು ವಾಪಸು ಪಡೆಯುವುದಾಗಲಿ ಅಥವಾ ಅದರಲ್ಲಿ ಬದಲಾವಣೆಗಳನ್ನು ಮಾಡುವುದಕ್ಕಾಗಲಿ ತಿರುಪತಿಯ ಆಡಳಿತ ಮಂಡಳಿ ಮಂಡಳಿ ಅವಕಾಶ ನೀಡುವುದಿಲ್ಲ.
ಅಲ್ಲಿಗೆ ರೆಡ್ಡಿಗಾರು ಮೇಲೆ ತಿಮ್ಮಪ್ಪ ಅವಕೃಪೆ ಬೀರುವುದು ಖಚಿತವಾಗಿತ್ತು. ಆದರೂ ... ರೆಡ್ಡಿಗಾರುಗೆ ತಡವಾಗಿ ಜ್ಞಾನೋದಯವಾಗಿ ತಮ್ಮ ಹೆಸರನ್ನು ಅಳಿಸಿಹಾಕುವ ಕಾರ್ಯಕ್ಕೆ ಮುಂದಾದರು. ತಿಮ್ಮಪ್ಪನ ಭಯ ಹೇಚ್ಚಾಗುತ್ತಾ ಹೋದಂತೆ ಹೇಗಾದರೂ ಮಾಡಿ ತಮ್ಮ ಹೆಸರನ್ನು ತೆಗೆಸಿ ಹಾಕಿ ಎಂದು ಟಿಟಿಡಿಗೆ ದುಂಬಾಲು ಬಿದ್ದರು.
ಆಡಳಿತ ಮಂಡಳಿಯೂ, ರೆಡ್ಡಿಗಾರು ಎಷ್ಟೇ ಆಗಲಿ ಮನವಾಡು ಎಂದು ತನ್ನ ನೀತಿಯನ್ನು ಸಡಿಲಿಸಲು ಮನಸ್ಸು ಮಾಡಿತು. ಆದರೆ ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಅದಕ್ಕೆ ಸಾಕಷ್ಟು ಸಮಯವೂ ಹಿಡಿಸುತ್ತದೆ. ಎರಡು ಮೂರು ಬಾರಿ ಈ ಪ್ರಯತ್ನಕ್ಕೆ ಕೈಹಚ್ಚಲಾಯಿತಾದರೂ ಅದು ಸಾಧ್ಯವಾಗಲಿಲ್ಲ.
ಆದರೆ ಆವೇಳೆಗೆ ತಿಪ್ಪಮ್ಮ ತನ್ನ ಭಕ್ತನ ಮೇಲೆ ಮುನಿದಿದ್ದ. ಶಾಪ ನೀಡಿಯಾಗಿತ್ತು. ಅದರಂತೆ ಜನಾರ್ದನ ರೆಡ್ಡಿ ಚಂಚಲಗೂಡ ಜೈಲು ಸೇರಿಕೊಂಡರು ಎಂಬುದರೊಂದಿಗೆ ರೆಡ್ಡಿ ಕಿರೀಣ ಪುರಾಣ ಮುಕ್ತಾಯವಾಗತ್ತದೆ.












Click it and Unblock the Notifications