ಕಿರೀಟದ ಮೇಲೆ ಹೆಸರು ಕೆತ್ತಿಸಿದ ರೆಡ್ಡಿಗೆ ತಿಮ್ಮಪ್ಪನ ಶಾಪ

ಅಸಲಿಗೆ ತಿಮ್ಮಪ್ಪ ತನ್ನ ಅತ್ಯಂತ ಶ್ರೀಮಂತ ಭಕ್ತ, ತನಗೆ ಅಪಾರ ಮೌಲ್ಯದ ವಜ್ರ ವೈಡೂರ್ಯಗಳನ್ನೇ ಕಾಣಿಕೆ ನೀಡಿರುವ ಭಕ್ತನ ಮೇಲೆಯೇ ಮುನಿಸಿಕೊಂಡಿದ್ದಾದರೂ ಏಕೆ? ಈ ಕಾರಣ ಕೇಳಿ ಸ್ವತಃ ರೆಡ್ಡಿಯೇ ಈಗ ಜೈಲಿನಲ್ಲಿ ಪಶ್ಚಾತ್ತಾಫ ಪಡುತ್ತಾ ಕಾಲ ಕಳೆಯುತ್ತಿದ್ದಾರಂತೆ.
ಏನಪಾ ಆ ಕಾರಣ ಎಂದು ತಿಳಿದುಕೊಳ್ಳುವ ಯತ್ನವಾಗಿ... ಸುಮಾರು ಎರಡೂವರೆ ವರ್ಷಗಳ ಹಿಂದೆ ತಿಮ್ಮಪ್ಪನ ಪರಮಭಕ್ತ ಜನಾರ್ದನ ರೆಡ್ಡಿ ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯನ್ನು ಭೇಟಿಯಾಗಿ ನನ್ನಪ್ಪ ತಮ್ಮಪ್ಪನಿಗೆ ನಾನೊಂದು ಅಪರೂಪದ, ಅಮೂಲ್ಯ ಕಾಣಿಕೆ ನೀಡಬೇಕೆಂದಿರುವೆ, ದಯವಿಟ್ಟು ಒಪ್ಪಿಸಿಕೊಳ್ಳಿ ಎಂದು ವಿನಂತಿಸಿದರು.
ಟಿಟಿಡಿ ಇದಕ್ಕೆ ಸಮ್ಮತಿಸುತ್ತಿದ್ದಂತೆ ರೆಡ್ಡಿ ವಿಶೇಷವಾಗಿ ತಯಾರಿಸಿದ್ದ 45 ಕೋಟಿ ರುಪಾಯಿ ಮೌಲ್ಯದ ಚಿನ್ನದ ಕಿರೀಟವನ್ನು ವನ್ ಫೈನ್ ಡೆ ದೇವರಿಗೆ ಸಮರ್ಪಿಸಿದರು. ಆದರೆ ಆಗ ಒಂದು ಯಡವಟ್ಟು ಕೆಲಸ ಮಾಡಿಕೊಂಡರು. ಏನಪಾ ಅಂದರೆ
ತಿರುಪತಿಯ ಧಾರ್ಮಿಕ ಸಂಪ್ರದಾಯಕ್ಕೆ ವಿರುದ್ಧವಾಗಿ ಆ ಕಿರೀಟದಲ್ಲಿ ತಮ್ಮ ಹೆಸರನ್ನು ಕೆತ್ತಿಸಿ, ಅಜರಾಮರವಾಗಿ ಉಳಿಯಬಯಸಿದರು. ಆದರೇ ಅದೇ ಯಡವಟ್ಟಾಗಿದ್ದು. ಏಕೆಂದರೆ ಇಲ್ಲಿನ ರೂಢಿಯಂತೆ ಯಾರು ಎಷ್ಟೇ ದುಬಾರಿಯ ಕಾಣಿಕೆ ಅರ್ಪಿಸಿದರೂ ಅದರ ಮೇಲೆ ತಮ್ಮ ಹೆಸರನ್ನು ದಾಖಲಿಸುವಂತಿಲ್ಲ. ಆದರೆ ರೆಡ್ಡಿ ದಾಖಲಿಸಲೇ ಬೇಕೆಂದು ಹಟಕ್ಕೆ ಬಿದ್ದರು. ಮುಂದೇನಾಯಿತು ... ಓದಿ!?












Click it and Unblock the Notifications