ಸರಿತಾ ಲೈಂಗಿಕ ಕಿರುಕುಳ, ಪ್ರೊ. ಶಿವಬಸವಯ್ಯ ವರ್ಗಾವಣೆ

Sarita and Prof Shivabasaiah
ಮೈಸೂರು, ನ.10 : ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಮಾನಸ ಗಂಗೋತ್ರಿ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಶಿವಬಸವಯ್ಯ ಅವರನ್ನು ಮೈಸೂರು ವಿವಿಯಿಂದ ಶಿವಮೊಗ್ಗದ ಕುವೆಂಪು ವಿವಿಗೆ ಎತ್ತಂಗಡಿ ಮಾಡಲಾಗಿದೆ.

ಸಂಶೋಧನಾ ವಿದ್ಯಾರ್ಥಿನಿ ಎಂ ಸರಿತಾ ಅವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿದ್ದ ಶಿವಬಸವಯ್ಯ ಅವರನ್ನು ಕುಲಾಧಿಪತಿಗಳೂ ಆದ ರಾಜ್ಯಪಾಲ ಎಚ್ಆರ್ ಭಾರದ್ವಾಜ್ ಅವರ ಶಿಫಾರಸ್ಸಿನ ಮೇರೆಗೆ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ.

ಶಿವಬಸವಯ್ಯ ಅವರು ತಮಗೆ ಲೈಂಗಿಕ ಕಿರುಕುಳ ನೀಡಿದರೆಂದು ಆರೋಪಿಸಿ ಸಂಶೋಧನಾ ವಿದ್ಯಾರ್ಥಿ ಸರಿತಾ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಸಂಬಂಧ ದೂರು ನೀಡಲು ಹೋದಾಗ ಕುಲಪತಿ ಪ್ರೊ. ವಿ.ಜಿ. ತಳವಾರ್ ಅವರು ಸರಿಯಾಗಿ ಸ್ಪಂದಿಸಿರಲಿಲ್ಲ. ಕೊನೆಗೆ ಮೈಸೂರಿನಲ್ಲಿ ಧರಣಿ ಕುಳಿತು ನ್ಯಾಯಕ್ಕಾಗಿ ಹೋರಾಟ ನಡೆಸಿದ ಸರಿತಾಗೆ ನ್ಯಾಯ ಸಿಕ್ಕಿದೆ.

ಲೈಂಗಿಕ ಕೇಸ್ ಹಿಸ್ಟರಿ ಇಲ್ಲಿದೆ ನೋಡಿ

ವಿವಿ ನೇಮಿಸಿದ್ದ ಮಹಿಳಾ ದೌರ್ಜನ್ಯ ವಿಚಾರಣಾ ಸಮಿತಿಯು ಶಿವಬಸವಯ್ಯ ಅವರು ತಪ್ಪಿತಸ್ಥರೆಂದು ವರದಿ ನೀಡಿತ್ತು. ಆದರೆ, ಸಿಂಡಿಕೇಟ್ ಈ ವರದಿಯನ್ನು ಒಪ್ಪಿಕೊಳ್ಳದೇ ಇಲಾಖಾ ವಿಚಾರಣೆಗೆ ಮುಂದಾಗಿತ್ತು. ಇದರ ವಿರುದ್ಧ ಸರಿತಾ ಹೈಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತಂದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+