ಬಿಜೆಪಿಗೆ ಗುಡ್ ಬೈ ಹೇಳಿದ ಬಿ ಶ್ರೀರಾಮುಲು
ಬಳ್ಳಾರಿ,
ನ 9: ಬುಧವಾರ ಬೆಳಗ್ಗೆ ಸಂಭವಿಸಿದ ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಬಿ. ಶ್ರೀರಾಮುಲು ರಾಜೀನಾಮೆ ನೀಡಿದ್ದಾರೆ. ಬಳ್ಳಾರಿ ಗ್ರಾಮಾಂತರ ಮರುಚುನಾವಣೆಯಲ್ಲಿ ಶ್ರೀರಾಮುಲು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಬಿಜೆಪಿಯಲ್ಲಿ ನನಗೆ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ, ಇದು ಸ್ವಾಭಿಮಾನದ ಸಮರ ಎಂದು ಬಿಜೆಪಿಗೆ ಸವಾಲು ನೀಡಿದ್ದಾರೆ. id="toptextpromo">ಇಂದು
(ನ 9) ಮಧ್ಯಾಹ್ನ 1.30 ಕ್ಕೆ ಶ್ರೀರಾಮುಲು ನಾಮಪತ್ರ ಸಲ್ಲಿಸಲಿದ್ದಾರೆ. ಬೆಂಬಲಿಗರು ಮತ್ತು ಆಪ್ತರ ಸಲಹೆಯಂತೆ ಈ ನಿರ್ಧಾರಕ್ಕೆ ಬಂದಿದ್ದೇನೆ. ನಾನು ರಾಜಕೀಯವಾಗಿ ಈ ಮಟ್ಟಕ್ಕೆ ಬೆಳೆಯಲು ಜನಾರ್ಧನ ರೆಡ್ಡಿ ಕಾರಣ. ಜನತೆ ನನ್ನನ್ನು ಕೈಬಿಡುವುದಿಲ್ಲ, ಬಳ್ಳಾರಿ ಜನತೆ ನನ್ನನ್ನು ಭಾರೀ ಬಹುಮತದಿಂದ ಆರಿಸುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಶ್ರೀರಾಮುಲು ಹೇಳಿಕೆ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ನಾಮಪತ್ರ
ಸಲ್ಲಿಕೆಯ ಮುನ್ನ ಮೆರವಣಿಗೆ ನಡೆಸಲಿರುವ ಶ್ರೀರಾಮುಲು ನಗರದ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಕೌಲ್ ಬಜಾರ್ ದರ್ಗಾಕ್ಕೆ ಭೇಟಿ ನೀಡಿದ ಶ್ರೀರಾಮುಲು, ಜನಾರ್ಧನ ರೆಡ್ಡಿ ಇಲ್ಲದಿರುವುದು ಬೇಸರ ತಂದಿದೆ ಎಂದಿದ್ದಾರೆ. ಈ ಮಧ್ಯೆ ಬಳ್ಳಾರಿ ನಗರ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಶ್ರೀರಾಮುಲು ವಿರುದ್ದವಾಗಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಬಾರದೆಂದು ಮನವಿ ಮಾಡಿದ್ದಾರೆ.











Click it and Unblock the Notifications