ಗುದದಲ್ಲಿ ಚಿನ್ನದ ಬಿಸ್ಕತ್ತು ಇಟ್ಕೊಂಡಿದ್ದ ಐನಾತಿ ಕಳ್ಳ

ಈ ಐನಾತಿ ಕಳ್ಳ ಗುದದ್ವಾರದಲ್ಲಿ ಬರೋಬ್ಬರಿ 9 ಚಿನ್ನದ ಬಿಸ್ಕತ್ ಇಟ್ಟುಕೊಂಡಿದ್ದ.ಆರೋಪಿಯನ್ನು ತಿರುಚ್ಚಿ ನಿವಾಸಿ ಬದ್ರುದ್ದೀನ್ ಯೂಸುಫ್ ಗುರುತಿಸಲಾಗಿದ್ದು, ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಈತ ಕೊಲಂಬೋದಿಂದ ವಿಮಾನದಲ್ಲಿ ಬಂದಿಳಿದು ಚೆನ್ನೈಯತ್ತ ಪ್ರಯಾಣ ಬೆಳೆಸುತ್ತಿದ್ದ. ಆತನ ನಡಿಗೆ ಕಂಡು ಸಂಶಯ ಮೂಡಿತು. ತಪಾಸಣೆ ವೇಳೆ ಗುದದ್ವಾರದಲ್ಲಿ ಚಿನ್ನದ ಬಿಸ್ಕತ್ ಬಚ್ಚಿಟ್ಟಿರುವುದು ಪತ್ತೆಯಾಗಿದೆ.
ಅಂದಾಜು 25 ಲಕ್ಷ ರೂ. ಮೌಲ್ಯದ ಒಂಬತ್ತು ಚಿನ್ನದ ಬಿಸ್ಕತ್ ವಶಪಡಿಸಿಕೊಳ್ಳಲಾಗಿದೆ. ಸ್ಮಗ್ಲಿಂಗ್ ಜಾಲದ ಬಗ್ಗೆ ಯಾವುದೇ ಸುಳಿವು ಕೊಟ್ಟಿಲ್ಲ. ವಿಚಾರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications