ಬಳ್ಳಾರಿ ಗ್ರಾ. ಉಪ ಚುನಾವಣೆ ಜೆಡಿಎಸ್ ದೂರ: ದೇವೇಗೌಡ

bellary-bypoll-jds-to-abstain-from-contest
ಬೆಂಗಳೂರು, ನ. 8: ಶ್ರೀರಾಮುಲು ತಲೆನೋವಿನಿಂದ ಬಿಜೆಪಿ ತೊಳಲಾಡುತ್ತಿದ್ದರೆ ಜೆಡಿಎಸ್ ಬಳ್ಳಾರಿ ಸಹವಾಸವೇ ಬೇಡವೆಂದು ಉಪ ಚುನಾವಣೆಯಿಂದ ದೂರವುಳಿಯಲು ಮುಂದಾಗಿದೆ. ಗಮನಾರ್ಹವೆಂದರೆ ದೇವೇಗೌಡರು ಆರೋಗ್ಯದ ನೆಪವೊಡ್ಡಿ ಕೊಪ್ಪಳ ಉಪಚುನಾವಣೆಯಿಂದಲೂ ದೂರ ಉಳಿದಿದ್ದರು.

ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದು ಬೇಡ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಠ ತೊಟ್ಟಿರುವುದೇ ಇದಕ್ಕೆ ಕಾರಣವಾಗಿದೆ. ಜೆಡಿಎಸ್ ನ ಇತರೆ ಕಲಿಗಳು ಇದಕ್ಕೆ ಸಮ್ಮತಿಸುವ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಳೆದ ಮೂರು ವರ್ಷಗಳಿಂದ ಬಿಜೆಪಿಯವರು ಪದೇ ಪದೆ ಉಪ ಚುನಾವಣೆ ನಡೆಯುವಂತೆ ಮಾಡಿರುವುದು ಅಸಹ್ಯಕರ ಬೆಳವಣಿಗೆ. ಇದನ್ನು ವಿರೋಧಿಸುವ ದೃಷ್ಟಿಯಿಂದ ಸ್ಪರ್ಧೆ ಮಾಡದಿರುವುದು ಒಳ್ಳೆಯದು. ಉಪ ಚುನಾವಣೆಗೆ ಹಾಕುವ ಶ್ರಮವನ್ನು ಪಕ್ಷದ ಸಂಘಟನೆಗೆ ಉಪಯೋಗಿಸುವುದು ಸೂಕ್ತ ಎಂದು ದೇವೇಗೌಡ ಸಲಹೆ ಮಾಡಿದ್ದಾರೆ ಎಂದು ಗೊತ್ತಾಗಿದೆ.

ಮಾಜಿ ಸಚಿವ ಬಿ. ಶ್ರೀರಾಮುಲು ಬಿಜೆಪಿಯಿಂದ ಕಣಕ್ಕೆ ಇಳಿಯದೆ, ಪಕ್ಷೇತರರಾಗಿ ಸ್ಪರ್ಧೆ ಮಾಡಿದರೆ ಜೆಡಿಎಸ್ ಅವರಿಗೆ ಬೆಂಬಲ ನೀಡುವ ಸಾಧ್ಯತೆಗಳಿವೆ. ಶ್ರೀರಾಮುಲು ರಾಜಕೀಯವಾಗಿ ತೆಗೆದು ಕೊಳ್ಳುವ ತೀರ್ಮಾನವನ್ನು ನೋಡಿಕೊಂಡು ಮುಂದಿನ ಹೆಜ್ಜೆ ಇಡಲು ಜೆಡಿಎಸ್ ವಲಯದಲ್ಲಿ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+