ಕೃಷ್ಣ ತನಿಖೆ ಲೋಕಾಯುಕ್ತ ಹೆಗಲಿಗೆ: ಗೌಡ ಫ್ಯಾಮಿಲಿ ಕಂಗಾಲು

ಇದರಿಂದ 'ಲೋಕ ಸೇವಕ' ಡಾ. ಕೃಷ್ಣಗಿಂತ ಹೆಚ್ಚಾಗಿ ಖುದ್ದು ದೇವೇಗೌಡ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಮೊದಲೇ, ಭ್ರಷ್ಟರ ವಿರುದ್ಧ ಲೋಕಾಯುಕ್ತ ಉರಿದುಬೀಳುತ್ತಿದ್ದೆ. ಅಂಥದ್ದರಲ್ಲಿ ಸಿಐಡಿ ಪೊಲೀಸರು ಪ್ರಕರಣವನ್ನು ಲೋಕಾಯುಕ್ತಕ್ಕೆ ಒಪ್ಪಿಸಿ, ತಮಾಶೆ ನೋಡತೊಡಗಿದ್ದು ದೇವೇಗೌಡರಿಗೆ ಸಹಿಸಲಾಗಿಲ್ಲ. ಹೀಗಾಗಿ ಸಿಐಡಿ ಯಜಮಾನ ಶಂಕರಿ ಬಿದರಿ ವಿರುದ್ಧ ಗೌಡ ಫ್ಯಾಮಿಲಿ ಎಗರೆಗರಿ ಬೀಳ ತೊಡಗಿದೆ.
ಈ ಮಧ್ಯೆ, 'ಲೋಕ ಸೇವಕ' ಡಾ. ಕೃಷ್ಣರನ್ನು ಸಮಾಧಾನಪಡಿಸಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪದೇಪದೆ ಪರಪ್ಪನ ಅಗ್ರಹಾರಕ್ಕೆ ಭೇಟಿ ಕೊಟ್ಟು, ಸಮಾಧಾನದ ಮಾತುಗಳನ್ನಾಡಿದ್ದಾರೆ. ಅಲ್ಲಿಂದ ವಾಪಸು ಬರುವಾಗ ಸೀದಾ ವಸಂತನಗರಕ್ಕೆ ತೆರಳಿ 'ಲೋಕ ಸೇವಕ' ಡಾ. ಕೃಷ್ಣ ಕುಟುಂಬದವರನ್ನೂ ಭೇಟಿ ಮಾಡಿ, ಸಮಾಧಾನ ಮಾಡುವ ನೈತಿಕ ಹೊಣೆ ಹೊತ್ತಿದ್ದಾರೆ.
ಇಷ್ಟಕ್ಕೆ ತೃಪ್ತರಾಗದ ದೊಡ್ಡಗೌಡರು ತಮ್ಮ ಕುಮಾರನ ಪರಮಾಪ್ತ ಗೆಣೆಕಾರ ಚಲುವರಾಯಸ್ವಾಮಿಯನ್ನೂ ಆಗಾಗ ಜೈಲಿಗಟ್ಟಿ, 'ಲೋಕ ಸೇವಕ' ಡಾ. ಕೃಷ್ಣ ಯೋಗಕ್ಷೇಮದ ರಿಪೋರ್ಟ್ ತರಿಸಿಕೊಂಡಿದ್ದಾರೆ. ಇದನ್ನೆಲ್ಲ ಕಣ್ಣಳತೆಯಲ್ಲೇ ಗಮನಿಸುತ್ತಿರುವ ಲೋಕಾಯುಕ್ತ ಎಸ್ಪಿ ಪಿಕೆ ಶಿವಶಂಕರ್ ಅವರು 'ಲೋಕ ಸೇವಕ'ನ ವಿರುದ್ಧ ಸರಿಯಾಗಿ ಕೇಸು ಜಡಿಯಲು ಎಲ್ಲ ಕಡೆಗಳಿಂದಲೂ ಮಾಹಿತ ಕಲೆಹಾಕುತ್ತಿದ್ದಾರೆ.












Click it and Unblock the Notifications