'ಲೋಕ ಸೇವಕ' ಡಾ.ಕೃಷ್ಣ ಬರೋಬ್ಬರಿ 10 ಸೈಟುಗಳ ಭೂಪತಿ!

ಕೆಪಿಎಸ್ ಸಿ ನೇಮಕ ಹಗರಣ ರಾದ್ಧಾಂತದಲ್ಲಿ ಸಿಲುಕಿರುವ ಮಾಜಿ ಪ್ರಧಾನಿ ದೇವೇಗೌಡರ ಕ್ಯಾಂಡಿಡೇಟ್ ಕೃಷ್ಣ ಅವರ ವಸಂತನಗರ ಮನೆಯ ಮೇಲೆ ಸಿಐಡಿ ಪೊಲೀಸರು ದಾಳಿ ನಡೆಸಿದ್ದು, ಅಕ್ರಮಗಳ ಖಜಾನೆಯೇ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ (ಜಿ ಕೆಟಗರಿ) ಬಿಡಿಎ ನಿಂದ ಇಂದಿರಾನಗರದ ಎಯ್ಟಿ ಫೀಟ್ ರೋಡಿನಲ್ಲಿ ಅಂದಿನ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಸಾಹೇಬರು ಕೃಷ್ಣಗೆ ದಯಪಾಲಿಸಿದ್ದರು. ಕುತೂಹಲದ ಸಂಗತಿಯೆಂದರೆ, ಮುಂದೆ ಧರ್ಮಸಿಂಗ್ ಆಡಳಿತಕ್ಕೆ ಬರುತ್ತಿದ್ದಂತೆ ಜಿ ಕೆಟಗರಿ ಸೈಟನ್ನು ವಾಣಿಜ್ಯ ಸೈಟ್ ಆಗಿ ಬದಲಾಯಿಸಿಕೊಳ್ಳುವಲ್ಲಿಯೂ ಕೃಷ್ಣ ಯಶಸ್ವಿಯಾಗಿದ್ದಾರೆ.
ಬಳಿಕ, ಕೃಷ್ಣ ಪರಮಾತ್ಮ ಆ ಸೈಟಿನಲ್ಲಿ ವಾಣಿಜ್ಯ ಸಂಕೀರ್ಣ ಎಬ್ಬಿಸಿ, ತಿಂಗಳಿಗೆ 5 ಲಕ್ಷ ರುಪಾಯಿ ಬಾಡಿಗೆ ದುಡಿಸಿಕೊಳ್ಳುತ್ತಿದ್ದಾರೆ. ಇದೀಗ, ಕೃಷ್ಣ ತನಿಖೆ ಲೋಕಾಯುಕ್ತ ಹೆಗಲೇರಿದ್ದು ಗೌಡ ಫ್ಯಾಮಿಲಿ ಕಂಗಾಲಾಗಿದೆ...












Click it and Unblock the Notifications