ಭ್ರಷ್ಟಾಚಾರ, ಕಪ್ಪುಹಣದ ಬಗ್ಗೆ ಸೋನಿಯಾ ಮೌನ: ಅಡ್ವಾಣಿಗೆ ಅರಳುಮರುಳು
ನವದೆಹಲಿ,
ನ. 7: ಭ್ರಷ್ಟಾಚಾರ, ಕಪ್ಪುಹಣ, ಹಣದುಬ್ಬರಗಳ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮೌನ ವಹಿಸಿದ್ದಾರೆ ಎಂದು ಟೀಕಿಸಿರುವ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರಿಗೆ ವಯೋಸಹಜ ಅರಳುಮರುಳು ಕಾಡುತ್ತಿರಬಹುದು ಎಂದು ದಿಗ್ವಿಜಯ್ ಸಿಂಗ್ ವ್ಯಂಗ್ಯವಾಡಿದ್ದಾರೆ. id="toptextpromo">ಎಐಸಿಸಿಯಲ್ಲಿ
ಮಾತನಾಡಿದ್ದ ವೇಳೆ ಸೋನಿಯಾ ಭ್ರಷ್ಟಾಚಾರ ಮತ್ತು ಲೋಕಪಾಲ ಮಸೂದೆ ಕುರಿತು ಪ್ರಸ್ತಾಪಿಸಿದ್ದರು. ಅಡ್ವಾಣಿ ಇದನ್ನು ಮರೆತುಬಿಟ್ಟಿದ್ದಾರೆ. ವಯಸ್ಸಿನ ಭಾರದಿಂದಾಗಿ ಅಡ್ವಾಣಿ ಅವರಿಗೆ ಮರೆಗುಳಿತನ ಆವರಿಸಿರಬಹುದು ಎಂದು ಟ್ವಿಟ್ಟರ್ ನಲ್ಲಿ ಗೇಲಿ ಮಾಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ತಾವು
ನಡೆಸುತ್ತಿರುವ ಜನಚೇತನ ಯಾತ್ರೆ ಮುಂಬೈಗೆ ಆಗಮಿಸಿದ ಸಂದರ್ಭದಲ್ಲಿ ಸಾರ್ವಜನಿಕ ಭಾಷಣ ಮಾಡಿದ ಅಡ್ವಾಣಿ, ಕಪ್ಪುಹಣ-ಭ್ರಷ್ಟಾಚಾರ-ಹಣದುಬ್ಬರಗಳ ಕುರಿತು ಮಾತನಾಡುವಂತೆ ಸೋನಿಯಾ ಗಾಂಧಿ ಅವರನ್ನು ಆಗ್ರಹಿಸಿದ್ದರು.











Click it and Unblock the Notifications