ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಸಿಎಂ ಯಡಿಯೂರಪ್ಪಗೆ ಷರತ್ತುಬದ್ಧ ಜಾಮೀನು

By Mahesh
|
Google Oneindia Kannada News

Yeddyurappa gets bail
ಬೆಂಗಳೂರು, ನ.3: ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಬಿ.ಎಸ್.ಯಡಿಯೂರಪ್ಪ ಹಾಗೂ ಕೃಷ್ಣಯ್ಯ ಶೆಟ್ಟಿ ಅವರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. ಆದರೆ, ಇಬ್ಬರ ಬಂಧನ ಅವಧಿಯನ್ನು ವಿಸ್ತರಣೆ ಮಾಡಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.

ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿರಾಜಿನ್ ಬಾಷಾ ಸಲ್ಲಿಸಿರುವ 2 ಹಾಗೂ 3ನೇ ದೂರಿನ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಬಿವಿ ಪಿಂಟೋ ಅವರಿದ್ದ ಏಕಸದಸ್ಯ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ನ.15ಕ್ಕೆ ಮುಂದೂಡಿ ಆದೇಶವನ್ನು ಹೊರಡಿಸಿದೆ. 4ನೇ ದೂರಿನ ವಿಚಾರಣೆ ಮುಂದುವರೆದಿದೆ.

3ನೇ ಖಾಸಗಿ ದೂರಿಗೆ ಸಂಬಂಧಿಸಿದಂತೆ ಷರತ್ತುಬದ್ಧ ಜಾಮೀನು ಪಡೆದಿರುವ ಯಡಿಯೂರಪ್ಪವರು 5 ಲಕ್ಷ ರೂ ಬಾಂಡ್ ಸಲ್ಲಿಸಬೇಕಿದೆ. ಇಬ್ಬರು ಶ್ಯೂರಿಟಿ ಹಾಕಬೇಕಿದೆ. ಯಾವುದೇ ದಾಖಲೆ ನಾಶಪಡಿಸುವಂತಿಲ್ಲ ಎಂದು ಸೂಚಿಸಲಾಗಿದೆ.

ಈ ಮಧ್ಯೆ ವಿಚಾರಣೆ ಆಲಿಸಿದ ನ್ಯಾಯಮೂರ್ತಿ ಬಿವಿ ಪಿಂಟೋ ಅವರು ಕೆಳಹಂತದ ನ್ಯಾಯಾಲಯವನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ. ಆರೋಪ ಕೇಳಿಬಂದ ತಕ್ಷಣ ಜೈಲಿಗೆ ತಳ್ಳುವುದು ಸರಿಯಿಲ್ಲ. ಆರೋಪಿಗಳಿಗೂ ಅಪರಾಧಿಗಳಿಗೂ ವ್ಯತ್ಯಾಸ ಇಲ್ಲದಂತೆ ನ್ಯಾಯಾಲಯ ನಡೆದುಕೊಂಡಿರುವುದು ತಪ್ಪು ಎಂದು ಪಿಂಟೋ ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಮಧ್ಯೆ ನ್ಯಾಯಾಲಯಕ್ಕೆ ಆರೋಪಿ ಯಡಿಯೂರಪ್ಪ ಅವರನ್ನು ಹಾಜರು ಪಡಿಸಿದ್ದಕ್ಕೆ ಜೈಲು ಅಧಿಕಾರಿಗಳಿಗೆ ನೋಟಿಸ್ ನೀಡಲಾಯಿತು. ಇದಕ್ಕೆ ಉತ್ತರಿಸಿದ ಜೈಲು ಅಧಿಕಾರಿ ಲಕ್ಷ್ಮಿ ನಾರಾಯಣ ಅವರು, ಕೃಷ್ಣಯ್ಯ ಶೆಟ್ಟಿ ಅವರನ್ನು ಹಾಜರುಪಡಿಸಲಾಗಿದೆ. ಆದರೆ, ಯಡಿಯೂರಪ್ಪ ಅವರನ್ನು ಕೋರ್ಟಿಗೆ ಕರೆತರಲು ಸಿಬ್ಬಂದಿಗಳ ಕೊರತೆ ಕಾರಣ ಎಂದಿದ್ದಾರೆ.

ಬಿಎಸ್ ಯಡಿಯೂರಪ್ಪ ಅವರಿಗೆ ಜಾಮೀನು ದೊರೆತ ಹಿನ್ನೆಲೆಯಲ್ಲಿ ಮಲ್ಲೇಶರಂ ನಲ್ಲಿರುವ ಬಿಜೆಪಿ ಘಟಕದಲ್ಲಿ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಜಾಮೀನು ಸಿಕ್ಕಾಯ್ತು, ಬಿಡುಗಡೆ ಯಾವಾಗ...?

English summary
The High Court judge BV Pinto has granted bail to BS Yeddyurappa and Krishnaiah Shetty and adjourned the hearing of bail plea to Nov.15. But, both Yeddyurappa and Krishnaiah Shetty's judicial custody extended till the next hearing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X