ಯಡಿಯೂರಪ್ಪ ಬೇಲ್ ಸಿಕ್ಕರೂ ಜೈಲಲ್ಲೇ ವಾಸ

ಆದರೆ, 2ನೇ ದೂರಿಗೆ ಸಂಬಂಧಿಸಿದಂತೆ 19 ದಿನಗಳ ನ್ಯಾಯಾಂಗ ಬಂಧನ ಅನುಭವಿಸಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಮಾಜಿ ಮುಜರಾಯಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರು ನ.15ರ ವರೆಗೂ ಪರಪ್ಪನ ಅಗ್ರಹಾರ ಜೈಲಿನಲ್ಲೇ ಕಾಲಕಳೆಯಬೇಕಿದೆ. 3ನೇ ದೂರಿಗೆ ಸಂಬಂಧಿಸಿದಂತೆ ಷರತ್ತುಬದ್ಧ ಜಾಮೀನು ಸಿಕ್ಕಿದೆ.
ಗುರುವಾರ ಮಧ್ಯಾಹ್ನ 4ನೇ ದೂರಿನ ವಿಚಾರಣೆಗಳು ನಡೆಯಲಿದ್ದು, ನ್ಯಾಯಮೂರ್ತಿ ಪಿಂಟೋ ಅವರು ನೀಡಲಿರುವ ಆದೇಶದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಈ ಹಿಂದೆ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದು, ಪೂರ್ಣ ಪ್ರಮಾಣದ ಜಾಮೀನು ಅರ್ಜಿಯನ್ನು ಯಡಿಯೂರಪ್ಪ ಪರ ವಕೀಲ ಜಯಕುಮಾರ್ ಪಾಟೀಲ್ ಸಲ್ಲಿಸಿದ್ದರು. ಯಡಿಯೂರಪ್ಪ ಅವರ ವಿರುದ್ಧ ಸಿರಾಜಿನ್ ಬಾಷಾ ಅವರು ಒಟ್ಟು 15 ಕೇಸುಗಳು, 6 ದೂರುಗಳನ್ನು ಲೋಕಾಯುಕ್ತ ಕೋರ್ಟ್ ಗೆ ನೀಡಿದ್ದಾರೆ.












Click it and Unblock the Notifications