ಯಡ್ಡಿಗೆ ಜಾಮೀನು : ಬೂಕನಕೆರೆಯಲ್ಲಿ ಭುಗಿಲೆದ್ದ ಸಂಭ್ರಮ
ಬೆಂಗಳೂರು,
ನ. 3 : ಡಿನೋಟಿಫಿಕೇಷನ್ ಗೆ ಸಂಬಂಧಿಸಿದಂತೆ ಯಡಿಯೂರಪ್ಪನವರ ವಿರುದ್ಧ ಸಿರಾಜಿನ್ ಬಾಷಾ ದಾಖಲಿಸಿದ್ದ 3ನೇ ಕ್ರಿಮಿನಲ್ ಪ್ರಕರಣಗಳಲ್ಲಿ ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮತ್ತು ಅವರ ಹುಟ್ಟೂರು ಬೂಕನಕೆರೆಯಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. id="toptextpromo">ನ್ಯಾ.
ಪಿಂಟೋ ಅವರು ಜಾಮೀನು ನೀಡಿದ್ದರ ಸುದ್ದಿ ತಿಳಿಯುತ್ತಿದ್ದಂತೆ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಕುಚ್ಚೆದ್ದು ಕುಣಿದರು. ಬೂಕನಕೆರೆಯಲ್ಲಿಯೂ ಯಡಿಯೂರಪ್ಪನವರ ಅಭಿಮಾನಿಗಳು ಸಿಹಿ ಹಂಚಿ ಈ ಸಂತಸವನ್ನು ಹಳ್ಳಿಯ ಜನತೆಯೊಂದಿಗೆ ಆಚರಿಸುತ್ತಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಆದರೆ,
4ನೇ ದೂರಿನ ವಿಚಾರಣೆ ಹೈಕೋರ್ಟಲ್ಲಿ ಇನ್ನೂ ನಡೆಯುತ್ತಿದ್ದು, ಮಧ್ಯಾಹ್ನ ವಿಚಾರಣೆ ಮುಗಿದು ಅದರಲ್ಲಿಯೂ ಜಾಮೀನು ಸಿಕ್ಕರೆ ಮಾತ್ರ ಅವರು ಪರಪ್ಪನ ಅಗ್ರಹಾರದಿಂದ ಹೊರಬರಲು ಸಾಧ್ಯ. ದೂರು ಬಂದ ಮಾತ್ರಕ್ಕೆ ಜೈಲಿಗಟ್ಟುವುದು ತರವಲ್ಲ ಎಂದು ಲೋಕಾಯುಕ್ತ ವಿಶೇಷ ನ್ಯಾಯಾಲಯವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.











Click it and Unblock the Notifications