ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯೂ ಮುಂದಕ್ಕೆ

2ನೇ ದೂರಿನಲ್ಲಿ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. 3ನೇ ದೂರಿಗೆ ಸಂಬಂಧಿಸಿದಂತೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. 4ನೇ ದೂರಿಗೆ ಸಂಬಂಧಿಸಿದಂತೆ ಜಾಮೀನು ದೊರೆತರೆ ಮಾತ್ರ ಅವರಿಗೆ ರಿಲೀಫ್ ಎಂದು ಸಿರಾಜಿನ್ ಬಾಷಾ ಪರ ವಕೀಲ ನಿತಿನ್ ಹೇಳಿದ್ದಾರೆ.
ಜೀವಾವಧಿ ಶಿಕ್ಷೆ ಇದ್ದಾಗ ಮಾತ್ರ ಬೇಲ್ ನೀಡಲು ಕೋರ್ಟ್ ಹಿಂದೇಟು ಹಾಕುತ್ತದೆ. ಯಡಿಯೂರಪ್ಪ ಅವರು ಮಾಜಿ ಸಿಎಂ ಆದರೂ ಪ್ರಭಾವಿ ನಾಯಕರಾಗಿದ್ದಾರೆ. ಸಾಕ್ಷಿ ನಾಶ ಪಡಿಸುವ ಬಗ್ಗೆ ಭಯವಿದೆ.
ಅವರು ಜೈಲಿನಿಂದ ನ್ಯಾಯಾಲಯಕ್ಕೆ ಕರೆತರಲು ಸಿಬ್ಬಂದಿ ಕೊರತೆ ಜೊತೆಗೆ ಸಾರ್ವಜನಿಕರಿಗೆ ಆಗುವ ತೊಂದರೆ, ಗದ್ದಲದ ಬಗ್ಗೆ ಜೈಲು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನಿರೀಕ್ಷಣಾ ಜಾಮೀನು ಅರ್ಜಿ: 2,5 ಹಾಗೂ 6 ನೇ ದೂರಿಗೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದ ಯಡಿಯೂರಪ್ಪ ಅವರು ನ.8ರ ತನಕ ಕಾಯಬೇಕಿದೆ. ನಿರೀಕ್ಷಣಾ ಅರ್ಜಿ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.
ಈ ಬಗ್ಗೆ ಆಕ್ಷೇಪಣೆಗಳಿದ್ದರೆ ಸಿರಾಜಿನ್ ಬಾಷಾ ಪರ ವಕೀಲರು ಸಲ್ಲಿಸಬಹುದು ಎಂದು ನ್ಯಾಯಮೂರ್ತಿ ಬಿವಿ ಪಿಂಟೋ ಅವರು ಸೂಚಿಸಿದ್ದಾರೆ.












Click it and Unblock the Notifications