ಯಡಿಯೂರಪ್ಪ ಭವಿಷ್ಯ ಶುಕ್ರವಾರದಂದು ನಿರ್ಧಾರ

ಗುರುವಾರ ರಾಯರ ಕೃಪೆಯಿಂದ ಅರ್ಧ ಗೆಲುವು ಸಾಧಿಸಿದ್ದ ಯಡಿಯೂರಪ್ಪ ಶುಕ್ರವಾರದಂದು ಚಾಮುಂಡಿಗೆ ಕೈ ಮುಗಿದು ಉಳಿದ ದೂರಿನ ಉರುಳಿನಿಂದ ಪಾರು ಮಾಡು ತಾಯಿ ಎಂದು ಪ್ರಾರ್ಥಿಸಲಿದ್ದಾರೆ.
2ನೇ ದೂರಿನಲ್ಲಿ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. 3ನೇ ದೂರಿಗೆ ಸಂಬಂಧಿಸಿದಂತೆ ಷರತ್ತುಬದ್ಧ ಜಾಮೀನು ನೀಡಲಾಗಿತ್ತು.
ಹಾಗಾಗಿ ಗುರುವಾರ ಮಧ್ಯಾಹ್ನ ಹೈಕೋರ್ಟ್ ನಲ್ಲಿ 4ನೇ ದೂರಿಗೆ ಸಂಬಂಧಿಸಿದಂತೆ ನಡೆದ ವಿಚಾರಣೆ ಮಹತ್ವದ್ದಾಗಿತ್ತು. 4ನೇ ದೂರಿನ ವಿಚಾರಣೆ ನಡೆದು ಅದರಲ್ಲಿ ಜಾಮೀನು ದೊರೆತರೆ ಪರಪ್ಪನ ಅಗ್ರಹಾರದ ಜೈಲಿನಿಂದ ಹೊರಬೀಳಬಹುದಾಗಿತ್ತು.
ಈಗ ಶುಕ್ರವಾರದಂದು ಬಿ.ಎಸ್.ಯಡಿಯೂರಪ್ಪ ಹಾಗೂ ಕೃಷ್ಣಯ್ಯ ಶೆಟ್ಟಿ ಅವರ ಜಾಮೀನು ವಿಚಾರಣೆ ಕುತೂಹಲ ಹೆಚ್ಚಿಸಿದೆ. ವಿಚಾರಣೆ ಮುಗಿಸಿ ನಾಳೆ ದಿನವೇ ನ್ಯಾಯಮೂರ್ತಿ ಬಿವಿ ಪಿಂಟೋ ಅವರು ತೀರ್ಪು ನೀಡುವ ಸಾಧ್ಯತೆಯಿದೆ.












Click it and Unblock the Notifications