ಯಡ್ಡಿಯಿಂದ RSS ಗೆ ಆದ 'ಲಾಭ' ಏನು ಗೊತ್ತಾ !

ಯಡಿಯೂರಪ್ಪ ಅಕ್ರಮ ಹಗರಣದ ಬಗ್ಗೆ ಕಿವಿಹಿಂಡಿ ಬುದ್ದಿ ಹೇಳಬೇಕಾಗಿದ್ದ ಆರ್ಎಸ್ಎಸ್ ಮುಖಂಡರು ತಮ್ಮ ಮುಖಕ್ಕೂ ಮಸಿ ಮೆತ್ತಿ ಕೊಂಡಿದ್ದಾರೆ. ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಚಿನ್ನದಂತ ಜಾಗವನ್ನು ಜುಜುಬಿ ಲಕ್ಷ ರೂಪಾಯಿಗೆ ಮಾರಿದ್ದಾರೆ. ಹೀಗಿರುವಾಗ ತಮಗಾದ ಲಾಭದಿಂದ ಸಂಘಪರಿವಾರದ ಮುಖಂಡರು ಬಿಎಸ್ವೈ ಅವರನ್ನು ಹೇಗೆ ತರಾಟೆಗೆ ತೆಗೆದು ಕೊಳ್ಳಲಾಗುತ್ತೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಯಡಿಯೂರಪ್ಪ ಅವರ ಮೇಲೆ ಇಷ್ಟೊಂದು ಆರೋಪಗಳಿದ್ದರೂ ಆರ್ಎಸ್ಎಸ್ ಮುಖಂಡರು ಯಾಕೆ ತುಟಿ ಬಿಚ್ಚುತ್ತಿಲ್ಲ. ಮಾತೆದಿದ್ದರೆ ಕೇಶವಕೃಪಾ ದೌಡಾಯಿಸುವ ಬಿಜೆಪಿ ನಾಯಕರಿಗೆ ಯಾವ ಮುಖದಿಂದ ಬುದ್ದಿವಾದ ಹೇಳುತ್ತಾರೆ? ಕೋಟಿ ಕೋಟಿ ಮೌಲ್ಯದ ವಾಣಿಜ್ಯ ಭೂಮಿಯನ್ನು ತಮ್ಮ ಆರು ಅಂಗ ಸಂಸ್ಥೆಗಳಿಗೆ ಮಂಜೂರು ಮಾಡಿಸಿ ಕೊಳ್ಳುತ್ತಾರಲ್ಲಾ ಇಂತಹ ಸಂಘಟನೆಗಳಿಗೆ ನೀತಿ ಪಾಠ ಹೇಳುವ ನೈತಿಕ ಹಕ್ಕು ಇದೆಯಾ ಎಂದು ಸಿದ್ದು ಪ್ರಶ್ತ್ನಿಸಿದ್ದಾರೆ.
ಸಂಘಪರಿವಾರದ ರಾಷ್ಟ್ರೋತ್ಪನ್ನ ಪರಿಷತ್ ಹೆಸರೂ ಪಟ್ಟಿಯಲ್ಲಿದೆ. ಇಷ್ಟೆಲ್ಲಾ ಯಡಿಯೂರಪ್ಪ ಅವರಿಂದ ಲಾಭವಾದ ಮೇಲೆ ಸಂಘಪರಿವಾರದ ಮುಖಂಡರು ಅವರ ಭ್ರಷ್ಟಾಚಾರ ನೋಡಿ ಸುಮ್ಮನಿರದೆ ಇನ್ನೇನು ಮಾಡಲು ಸಾಧ್ಯವೆಂದು ಸಿದ್ದರಾಮಯ್ಯ ಹಾಸ್ಯ ಮಾಡಿದ್ದಾರೆ.












Click it and Unblock the Notifications