ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೇವಣ್ಣನ ಮೇಲೆ 'ಬೆಸ್ಕಾಂ' ಭೂತ ಛೂ ಬಿಟ್ಟ ಬಿಜೆಪಿ

By Mahesh
|
Google Oneindia Kannada News

HD Revanna
ಬೆಂಗಳೂರು, ನ.3: 'ರಾಜ್ಯ ಕತ್ತಲೆಯಲ್ಲಿದೆ, ಶೋಭಾ ಬೆಳಗುತ್ತಿದ್ದಾರೆ' ಎಂದು ಹಾಲಿ ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಕರ್ನಾಟಕ ಸರ್ಕಾರದ ವಿದ್ಯುತ್ ನೀತಿ ಬಗ್ಗೆ ಕುಹಕವಾಡಿದ್ದ ಮಾಜಿ ಇಂಧನ ಸಚಿವ ಎಚ್ ಡಿ ರೇವಣ್ಣ ಅವರಿಗೆ ಬಿಜೆಪಿ ಸರ್ಕಾರ ಸರಿಯಾದ ಚುರುಕು ಮುಟ್ಟಿಸಿದೆ.

ಶಾಸಕ ಎಚ್‌.ಡಿ. ರೇವಣ್ಣ ಅವರು ಇಂಧನ ಸಚಿವರಾಗಿದ್ದ ಕಾಲದಲ್ಲಿ ನಡೆದಿದೆ ಎನ್ನಲಾದ ಬೆಸ್ಕಾಂ ಅವ್ಯವಹಾರಗಳ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಬಿಜೆಪಿ ಸರ್ಕಾರ ಸೂಚಿಸಿದೆ.

ದೇವೇಗೌಡ ಕುಟುಂಬದ ವಿರುದ್ಧ ಬಿಜೆಪಿ ಸರ್ಕಾರ ಮತ್ತೂಮ್ಮೆ ತೊಡೆ ತಟ್ಟಿ ನಿಂತಿದೆ. ಎಫ್ಐಆರ್‌ ಭೀತಿ ಎದುರಿಸುತ್ತಿರುವ ರೇವಣ್ಣ ಅವರು ಬೆಸ್ಕಾಂ ಹಗರಣದ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

2006-2008ರ ಅವಧಿಯಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ ಕಯೊಟಾ ವಿದ್ಯುತ್‌ ವಾಹಕ(coyote conductors) ಖರೀದಿಯಲ್ಲಿ ಸಾಕಷ್ಟು ಅವ್ಯವಹಾರ ಆಗಿದೆ ಎಂದು ಮಹಾಲೇಖಪಾಲರ ವರದಿ(CAG report)ಯಲ್ಲಿ ಹೇಳಲಾಗಿದೆ. ಈ ವರದಿ ಆಧರಿಸಿ 2006-08ರಲ್ಲಿ ಆಗಿರುವ ಕಯೊಟಾ ವಿದ್ಯುತ್‌ ವಾಹಕ ಖರೀದಿ ವ್ಯವಹಾರಗಳ ಬಗ್ಗೆ ಲೋಕಾಯುಕ್ತರಿಂದ ತನಿಖೆ ನಡೆಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಹೇಳಿದ್ದಾರೆ.

ಅವ್ಯವಹಾರ ಕುರಿತು ಸರಿಯಾದ ದಾಖಲೆಗಳು ಕೂಡ ಲಭ್ಯ ವಾಗುತ್ತಿಲ್ಲ, ಆದರೆ, ಬೆಸ್ಕಾಂಗೆ ಸುಮಾರು 11.4 ಕೋಟಿ ರೂ ನಷ್ಟವಾಗಿದೆ. 2004 ರಿಂದ 2007ರ ತನಕ ರೇವಣ್ಣ ಅವರು ಇಂಧನ ಸಚಿವರಾಗಿದ್ದರು. ಮಹಾಲೇಖಪಾಲರ ವರದಿ ಆಧರಿಸಿ ಲೋಕಾಯುಕ್ತದಿಂದ ಹೆಚ್ಚಿನ ತನಿಖೆ ನಡೆಸುವ ಅವಶ್ಯಕತೆ ಇದೆ ಎಂದು ಸರ್ಕಾರ ಉಪ ಲೋಕಾಯುಕ್ತರಿಗೆ ನೀಡಿರುವ ಪತ್ರದಲ್ಲಿ ಹೇಳಲಾಗಿದೆ.

ರೇವಣ್ಣ ಅವರ ಮೇಲಿರುವ ಬಾಕಿ ಕೇಸುಗಳು ..ಮುಂದೆ ನೋಡಿ

English summary
CM DV Sadananda Gowda lead BJP government has ordered a Lokayukta probe against HD Deve Gowda's son former minister HD Revanna. HD Revanna then power minister has allegedly taken kick back and CAG reports of 2007 and 2008 on purchase of coyote conductors for Bescom with loss of Rs 11.4 crore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X