ನಾಲ್ಕು ಕೇಸುಗಳ ಕತ್ತಿ ಮೇಲೆ ನಿಂತಿರುವ ರೇವಣ್ಣ
ಬೆಂಗಳೂರು, ನ.3: ಶಾಸಕ ರೇವಣ್ಣ ಅವರ ಮೇಲೆ ಬೆಸ್ಕಾಂ ಭೂತ ಚೂ ಬಿಟ್ಟ ಬಿಜೆಪಿ ಸರ್ಕಾರ ಮಾಜಿ ಇಂಧನ ಸಚಿವರ ಮೇಲೆ ನಾಲ್ಕು ಕೇಸುಗಳನ್ನು ಹಾಕಲಾಗಿದೆ.
ಜೆಡಿಎಸ್ ಮುಖಂಡ ಎಚ್ ಡಿ ರೇವಣ್ಣ ಅವರ ಮೇಲೆ ಬೆಸ್ಕಾಂ ಅವ್ಯವಹಾರದ ರೂಪದಲ್ಲಿ ಸರ್ಕಾರದ ಬೊಕ್ಕಸಕ್ಕೆ 15ಕೋಟಿ ರು ನಷ್ಟ ಉಂಟು ಮಾಡಿದ ಆರೋಪವಿದೆ. ಇದಲ್ಲದೆ,
* ಪಿಡಬ್ಲ್ಯೂಡಿ ಇಂಜಿನಿಯರ್ ಗಳ ನೇಮಕಾತಿಯಲ್ಲಿ ಅಕ್ರಮ ಎಸೆಗಿರುವುದು,
* ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ವತಿಯಿಂದ ಹಾಸನದಲ್ಲಿ ನಿರ್ಮಾಣಗೊಂಡ ರಿಂಗ್ ರಸ್ತೆ ಹಣ ನುಂಗಿರುವುದು,
* ಕಲ್ಲಿದ್ದಲು ಹೆಚ್ಚಿನ ಬೆಲೆಗೆ ಖರೀದಿಸಿ ಅವ್ಯವಹಾರ ನಡೆಸಿರುವುದು
* ವಿದ್ಯುತ್ ಟ್ರಾನ್ ಫಾರ್ಮರ್ಸ್ ಖರೀದಿಯಲ್ಲಿ ಅಕ್ರಮವಾಗಿದೆ ಎಂದು ಕೇಸುಗಳು ಹಾಕಲಾಗಿದೆ.
ಇದರಲ್ಲಿ ಮೊದ ಎರಡು ಕೇಸುಗಳನ್ನು ಲೋಕಾಯುಕ್ತರು ತನಿಖೆ ನಡೆಸಲಿದ್ದಾರೆ. ಉಳಿದ ಎರಡು ದೂರಿಗೆ ಸಂಬಂಧಿಸಿದಂತೆ ಜಸ್ಟೀಸ್ ವಿಪಿ ಮೋಹನ್ ಕುಮಾರ್ ಆಯೋಗ ತನಿಖೆ ನಡೆಸಿ ಕಳೆದ ವಾರ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ.
ಎಚ್ ಡಿ ದೇವೇಗೌಡರ ಕುಟುಂಬದ ಮೇಲೆ ಅಕ್ರಮ ಆಸ್ತಿ ಗಳಿಕೆ ಆರೋಪ ಕೂಡಾ ಕೇಳಿ ಬಂದಿದ್ದು, ಇದರಲ್ಲಿ ರೇವಣ್ಣ ಅವರ ಪಾಲೂ ಸೇರಿದೆ.












Click it and Unblock the Notifications