ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುದೀಪ್ ಸಕ್ರಿಯ ರಾಜಕೀಯ ಎಂಟ್ರಿ ಹಿನ್ನೋಟ

By Mahesh
|
Google Oneindia Kannada News

Sudeep politics entry
ಬೆಂಗಳೂರು, ನ.3: ಚಿತ್ರನಟ ಕಿಚ್ಚ ಸುದೀಪ್ ರಾಜಕೀಯ ಪ್ರವೇಶದ ಬಗ್ಗೆ ಸುದ್ದಿ ವರ್ಷದ ಆರಂಭದಿಂದಲೇ ಗಿರಕಿ ಹೊಡೆಯುತ್ತಿದೆ. ನಟಿ ರಮ್ಯಾ ರಾಜಕೀಯಕ್ಕೆ ಎಂಟ್ರಿ ಕೊಡುವುದಕ್ಕೂ ಮೊದಲೇ ಸುದೀಪ್ ಚುನಾವಣೆಗೆ ಸ್ಪರ್ಧಿಸುವ ಮಾತುಗಳು ಕೇಳಿ ಬಂದಿತ್ತು.

ಜಗಳೂರು ವಿಧಾನಸಭಾಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಕಿಚ್ಚನ ಬೆನ್ನು ಬಿದ್ದಿತ್ತು. ಅದಕ್ಕೂ ಮುನ್ನ ಶಿವಮೊಗ್ಗ ವಿಧಾನಸಭೆಗೆ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು.

ಕಿಚ್ಚನ ಪ್ರತಿಕ್ರಿಯೆ: ಸುದೀಪ್ ಮಾತ್ರ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಚಕಾರ ಎತ್ತಿರಲಿಲ್ಲ. ಆದರೆ, ಕೆಲ ತಿಂಗಳುಗಳ್ ಹಿಂದೆ 'ಸಿನಿಮಾ ಜಗತ್ತು ಸಾಕಾಗಿದೆ ನಿವೃತ್ತಿ ಘೋಷಿಸುತ್ತೇನೆ' ಎಂದು ಟ್ವೀಟ್ ಮಾಡಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಅಂಬರೀಷ್ ನಿಲ್ಲುತ್ತಿದ್ದ ಸುದೀಪ್, ರೋಡ್ ಕಿಂಗ್ ನೈಸ್ ಖೇಣಿ ಜೊತೆ ಕೂಡಾ ಕಾಣಿಸಿಕೊಂಡಿದ್ದರು. ಖೇಣಿ ಹೊಸ ಪಕ್ಷದ ಅಭ್ಯರ್ಥಿಯಾಗುತ್ತಾರೆ ಎಂದು ಸುದ್ದಿ ಹಬ್ಬಿತ್ತು.

ಆದರೆ, ಎಂದೂ ಕೂಡಾ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡದ ಸುದೀಪ್ ತನ್ನ ಆಪ್ತರು ಸ್ಪರ್ಧಿಸಿದಾಗ ಪಕ್ಷಾತೀತವಾಗಿ ಬೆಂಬಲಿಸಿದ್ದರು. ಈಗ ಬಳ್ಳಾರಿಯಲ್ಲಿ ವಾಲ್ಮೀಕಿ ಜನಾಂಗದ ವೋಟುಗಳನ್ನು ಛಿದ್ರಗೊಳಿಸಲು ಕಾಂಗ್ರೆಸ್ ಹಾಗೂ ಜೆಡಿಸ್ ಮುಂದಾಗಿದ್ದು, ಶ್ರೀರಾಮುಲು ವಿರುದ್ಧ ಸುದೀಪ್ ನಿಲ್ಲಿಸಲು ಪ್ರಯತ್ನ ಸಾಗಿದೆ.

ಆಪರೇಷನ್ ಕಮಲದಿಂದ ತೆರವಾಗಿರುವ ಚೆನ್ನಪಟ್ಟಣ, ಜಗಳೂರು ಹಾಗೂ ಬಂಗಾರಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 2, 2011ರಂದು ಚುನಾವಣೆ ನಡೆದಿತ್ತು.

ಮೀಸಲು ಕ್ಷೇತ್ರವಾಗಿದ್ದ ಜಗಳೂರು ಸುದೀಪ್ ಪ್ರವೇಶಕ್ಕೆ ವೇದಿಕೆ ಒದಗಿಸಿತ್ತು. ಸುದೀಪ್ ಅವರ ಚಿಕ್ಕಪ್ಪ ಸರೋವರ್ ಶ್ರೀನಿವಾಸ್ ಜೆಡಿಎಸ್ ವಿಧಾನ ಪರಿಷತ್ ಸದಸ್ಯರೂ ಆಗಿರುವುದರಿಂದ ಸುದೀಪ್ ಅವರನ್ನು ಜೆಡಿಎಸ್‌ನಿಂದಲೇ ಕಣಕ್ಕಿಳಿಸುವ ಯತ್ನ ಈಗಲೂ ಮುಂದುವರೆದಿದೆ.

English summary
Bellary by election 2011: All parties are busy in selecting suitable candidates JDS likely to give ticket to Actor Sudeep, who missed chance to contest in Jagalur by election earlier this year. Congress also trying to catch the celebrity artist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X