ಬಳ್ಳಾರಿ: ಶ್ರೀರಾಮುಲು ಎದುರಾಗಿ ಕಿಚ್ಚ ಸುದೀಪ್?

Sudeep
ಬಳ್ಳಾರಿ, ನ.3: ಬಳ್ಳಾರಿ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಶ್ರೀರಾಮಲುಗೆ ಮತ್ತೆ ಟಿಕೆಟ್ ನೀಡಲು ರಾಜ್ಯ ಬಿಜೆಪಿ ನಿರ್ಧರಿಸಿದೆ. ಆದರೆ ಶ್ರೀರಾಮಲು ಕಮಲದ ಚಿಹ್ನೆಯಡಿ ಕಣಕ್ಕಿಳಿಯುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಮಧ್ಯೆ ನಟ ಸುದೀಪ್ ರನ್ನು ಕಣಕ್ಕಿಳಿಸಲು ಜೆಡಿಎಸ್ ಸಿದ್ಧತೆ ನಡೆಸಿದೆ.

ಬಳ್ಳಾರಿ ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷ ಎನ್ ಸೂರ್ಯನಾರಾಯಣ ರೆಡ್ಡಿ ಅವರು ಬೆಂಗಳೂರಿನಲ್ಲಿ ಜೆಡಿಎಸ್ ವರಿಷ್ಠರೊಡನೆ ಸಮಾಲೋಚನೆ ನಡೆಸಿದ್ದಾರೆ. ಶ್ರೀರಾಮುಲು ಸೋಲಿಸಲು ಪ್ರಬಲ ಅಭ್ಯರ್ಥಿಯ ಹುಡುಕಾಟದಲ್ಲಿದ್ದು, ನಟ ಸುದೀಪ್ ಹೆಸರು ಮುಂಚೂಣಿಯಲ್ಲಿದೆ.

ವಾಲ್ಮೀಕಿ ಸಮುದಾಯದ ಓಟುಗಳನ್ನು ಗಿಟ್ಟಿಸಿಕೊಳ್ಳಲು ಜೆಡಿಎಸ್ ಹಾಗೂ ಬಿಜೆಪಿ ಪ್ರಯತ್ನ ಮುಂದುವರೆದಿದೆ. ರಾಜಕೀಯ ಪ್ರವೇಶದ ಬಗ್ಗೆ ಸುದೀಪ್ ಯಾವುದೇ ಸೂಚನೆ ನೀಡದಿದ್ದರೂ ಅವರ ಕುಟುಂಬಕ್ಕೆ ರಾಜಕೀಯ ನಂಟು ಮೊದಲಿಂದಲೂ ಇದೆ.

ಶ್ರೀರಾಮುಲು ನಡೆ ನಿಗೂಢ:
ಸಿಬಿಐ ವಶದಲ್ಲಿರುವ ತಮ್ಮ ತಂಡದ ನಾಯಕ ಜನಾರ್ದನ ರೆಡ್ಡಿ ಜತೆ ಸಮಾಲೋಚನೆ ನಡೆಸಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ. ಚುನಾವಣೆ ಎದುರಿಸಲೆಂದೇ ಕಳೆದ ಎರಡು ದಿನಗಳಿಂದ ಕ್ಷೇತ್ರದಲ್ಲಿ ತಮ್ಮ ಬೆಂಬಲಿಗರ ಸಭೆ ಮತ್ತು ಜಾಥಾಗಳನ್ನು ಶ್ರೀರಾಮಲು ನಡೆಸಿದ್ದಾರೆ.

ಬಳ್ಳಾರಿಯಲ್ಲಿ ಬಿಜೆಪಿಗೆ ರೆಡ್ಡಿ ಬಣದ ಹೊರತಾಗಿ ಬೇರೆ ಅಭ್ಯರ್ಥಿಗಳೇ ಇಲ್ಲ. ಆದುದರಿಂದ ಶ್ರೀರಾಮಲು ಅನಿವಾರ್ಯ ಆಯ್ಕೆಯಾಗಲಿದೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ನಡೆಯುತ್ತಿರುವ 21ನೆ ಉಪಚುನಾವಣೆ ಇದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+