ಬೆಂಗಳೂರಿನ ವಿದ್ಯಾರ್ಥಿಗಳಿಗೆ ಗೋವಾ ಪೊಲೀಸರ ಪೀಡನೆ

ಇದೆಲ್ಲ ನಡೆದದ್ದು ಬಾಗಾ ಬೀಚ್ ನಲ್ಲಿ. ವಿದ್ಯಾರ್ಥಿಗಳು ಕಂಡೊಡನೆ ಪೊಲೀಸರಲ್ಲಿನ ತಡಕಾಡುವ ಬುದ್ಧಿ ಜಾಗೃತವಾಗಿದೆ. ಅವರಲ್ಲಿ ಸಿಗರೇಟಿನ ತುಂಡು, ಗುಂಡು ಎರಡೂ ಸಿಗದಿದ್ದಾಗ 50 ಸಾವಿರ ರು. ಹಣ ನೀಡಬೇಕೆಂದು ವಿದ್ಯಾರ್ಥಿಗಳನ್ನು ಪೀಡಿಸಿದ್ದಾರೆ.
ಅವರಲ್ಲೊಬ್ಬ ಹೇಗೋ ಮಾಡಿ ಬೆಂಗಳೂರಿನ ತನ್ನ ಪಾಲಕರನ್ನು ಸಂಪರ್ಕಿಸಿ, ಹಿರಿಯ ಪೊಲೀಸ್ ಅಧಿಕಾರಿಗಳ ಸಹಕಾರದೊಂದಿಗೆ ಗೋವಾದ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಮರುದಿನ ಗೋವಾ ಎಸ್ಪಿ ಅರವಿಂದ್ ಗವಾಸ್ ಅವರು ಇದರ ವಿಚಾರಣೆ ಮಾಡಬೇಕೆಂದು ಸಹಾಯಕ ಎಸ್ಪಿಗೆ ಆದೇಶಿಸಿದ್ದಾರೆ.
ಅವರನ್ನು ಕಲನ್ಗುಟ್ ಬೀಚ್ ಠಾಣೆಗೆ ಸಹಾಯಕ ಎಸ್ಪಿ ಪಂಢರಿನಾಥ್ ಕರೆದೊಯ್ದಿದ್ದಾರೆ. ಅಲ್ಲಿನ ಎಲ್ಲ ಪೇದೆಗಳನ್ನು ಸಾಲಾಗಿ ನಿಲ್ಲಿಸಿದಾಗ, ಹಣ ದೋಚಿದ ಪೊಲೀಸರಿಬ್ಬರನ್ನು ವಿದ್ಯಾರ್ಥಿಗಳು ಗುರುತಿಸಿದ್ದಾರೆ. ಆ ಪೇದೆಗಳನ್ನು ದೋಚಿದ್ದ ಹಣ ವಾಪಸ್ ನೀಡಿ ಕ್ಷಮೆ ಕೋರಿದ್ದಾರೆ. ಅಲ್ಲಿಗೆ ಚಾಪ್ಟರ್ ಕ್ಲೋಸ್!
ಆದರೆ, ವಿದ್ಯಾರ್ಥಿಗಳು ಇಲ್ಲಿಗೇ ಸುಮ್ಮನಾಗಿಲ್ಲ. ಪೇದೆಗಳ ವಿರುದ್ಧ ಅಧಿಕೃತವಾಗಿ ದೂರನ್ನು ದಾಖಲಿಸಿದ್ದಾರೆ. ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೂ ದೂರು ನೀಡಿದ್ದಾರೆ. ಕ್ಷಮೆ ಕೋರಿದರೆ ಸಾಲದು, ತಪ್ಪಿತಸ್ಥರ ವಿರುದ್ಧ ಸರಿಯಾದ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.
ಗೋವಾದಲ್ಲೂ ಕನ್ನಡಿಗರನೇಕರಿದ್ದಾರೆ. ರಜಾದಿನಗಳು ಬಂದರೆ ಹಿರಿಯರು ತೀರ್ಥಯಾತ್ರೆ ಕೈಗೊಂಡರೆ, ವಿದ್ಯಾರ್ಥಿಗಳು ಯಾತ್ರೆ ಕೈಗೊಳ್ಳುವುದೇ ಗೋವಾದಂಥ ಸ್ಥಳಕ್ಕೆ. ಕರ್ನಾಟಕದಿಂದ ಗೋವಾ ಸರಕಾರಕ್ಕೆ ಆದಾಯವೂ ಸಖತ್ತಾಗಿದೆ. ಹೀಗಿರುವಾಗ, ರಕ್ಷಿಸಬೇಕಾದ ಆರಕ್ಷಕರೇ ಪ್ರವಾಸಿಗರನ್ನು ಈಪರಿ ಪೀಡಿಸಿದರೆ ಹೇಗೆ?












Click it and Unblock the Notifications