ಡ್ರೈವರ್ ಟೈಟ್ ಆಗಿದ್ರೆ ಕೆಂಪುಬಸ್ ಇಸ್ಟಾರ್ಟ್ ಆಗಕಿಲ್ಲಾ

ವಾಹನದಲ್ಲಿ ಆಲ್ಕೋಹಾಲಿಕ್ ಟೆಸ್ಟ್ ಮೆಷಿನ್ ತಂತ್ರಜ್ಞಾನವನ್ನು ಅಳವಾಡಿಸಲಾಗಿದ್ದು, ಡ್ರೈವರ್ ಈ ಟೆಸ್ಟ್ ನಲ್ಲಿ ಪಾಸಾದರೆ ಮಾತ್ರ ಬಸ್ ಶುರುವಾಗುವುದು. ಆದ್ದರಿಂದ ಪ್ರಯಾಣಿಕರು ಯಾವುದೇ ಚಿಂತೆ ಇಲ್ಲದೆ ಬಿಎಂಟಿಸಿ ಬಸ್ ನಲ್ಲಿ ಸಂಚಾರ ಮಾಡಬಹದು. ಈ ತಂತ್ರಜ್ಞಾನವಿರುವ ಬಸ್ಸಿನ ಬೆಲೆ 55 ಲಕ್ಷದ ಮೇಲೆ 50 ಸಾವಿರ.
ಈ ಬಸ್ಸಿನ ಪ್ರಯಾಣದ ದರ ಕಿ.ಮೀ ಗೆ ಸರಾಸರಿ 1.40. ಟಾಟಾ ಮತ್ತು ಅಶೋಕ್ ಲೈಲ್ಯಾಂಡ್ ಸಂಸ್ಥೆಯ 28 ಬಸ್ ಗಳನ್ನು ಬಿಎಂಟಿಸಿ ಖರೀದಿಸಿದೆ. ಸದ್ಯ ಮುಂದಿನ ಎರಡು ತಿಂಗಳು ಸಂಸ್ಥೆ ಬೆಂಗಳೂರು ನಗರಗಳಲ್ಲಿ ಪ್ರಾಯೋಗಿಕ ಸಂಚಾರ ನಡೆಸಲಿದೆ.
ವಿಜಯನಗರ, ಕೆಂಪೇಗೌಡ ಕೇಂದ್ರ ಬಸ್ ನಿಲ್ದಾಣ, ಹಂಪಿನಗರ, ಶಿವಾಜಿನಗರ, ಶ್ರೀನಗರ ಮತ್ತು ಜೆ ಪಿ ನಗರ ಬಸ್ ನಿಲ್ದಾಣಗಳಿಂದ ಈ ಬಸ್ ಗಳು ಹೊರಡಲಿದೆ.












Click it and Unblock the Notifications