ಅಪ್ಪನ ಖಾತೆಯಿಂದ ಲಕ್ಷ ರೂ.ತಗೊಂಡು ಪ್ರೇಮಿ ಜತೆ ಬಾಲಕಿ ಪರಾರಿ

ಓಡಿಹೋಗುವಾಗ ಖರ್ಚಿಗೆ ಇರಲಿ ಎಂದು ಬಾಲಕಿಯು ತನ್ನ ಅಪ್ಪನ ಬ್ಯಾಂಕ್ ಖಾತೆಯಿಂದ 95 ಸಾವಿರ ರುಪಾಯಿ ಡ್ರಾ ಮಾಡಿಕೊಂಡು ಸೋಮವಾರ ಹೋಗಿದ್ದಾಳೆ.
ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ನಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿರುವ ಕೃಷ್ಣನ್ ಕುಮಾರ್ ತನ್ನ ಮಗಳನ್ನು ಮದುವೆಯಾಗುವುದಾಗಿ ನಂಬಿಸಿ, ಕರೆದೊಯ್ದಿದ್ದಾನೆ. ಕೃಷ್ಣನ್ ಗೆ ಈಗಾಗಲೇ ಒಂದು ಮದುವೆಯಾಗಿದೆ ಎಂದು ಬಾಲಕಿಯ ತಂದೆ ಓಂ ಪ್ರಕಾಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಗಮನಾರ್ಹವೆಂದರೆ ತಂದೆ ಓಂ ಪ್ರಕಾಶ್ ಸಹ ಸಿಆರ್ ಪಿಎಫ್ ನಲ್ಲಿ ಪೇದೆಯಾಗಿದ್ದಾರೆ.
ಕೃಷ್ಣನ್ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಜೋಡಿ ಹಕ್ಕಿಯ ಬೇಟೆಯಲ್ಲಿದ್ದಾರೆ. ಈ ಮಧ್ಯೆ, ಓಂ ಪ್ರಕಾಶ್ ಬ್ಯಾಂಕ್ ಖಾತೆಯನ್ನು ಪರಿಶೀಲಿಸಲಾಗಿದ್ದು, ಅವರ ಮಗಳೇ ಹಣ ಡ್ರಾ ಮಾಡಿರುವುದು ಖಾತ್ರಿಯಾಗಿದೆ. ಎಂದು ತಿಳಿದುಬಂದಿದೆ.












Click it and Unblock the Notifications