ಅರವಿಂದ್ ಕೇಜ್ರಿವಾಲ್ ಪತ್ನಿ ಸುನೀತಾ ಮೇಲೆ ಬಿತ್ತು ಕೇಂದ್ರದ ಕಣ್ಣು

arvind-kejriwal-wife-sunita-under-radar
ಹೊಸದಿಲ್ಲಿ, ಅ. 30: ಮೂಲತಃ ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಯಾಗಿರುವ ಸುನೀತಾ ಕೇಜ್ರಿವಾಲ್‌ ಅವರನ್ನು ಗಂಭೀರ ವಂಚನೆ ತನಿಖಾ ಕಚೇರಿಯಲ್ಲಿ (ಎಸ್‌ಎಫ್‌ಐಒ) ಇನ್ನೂ ಉಳಿಸಿಕೊಂಡಿರುವುದಾದರೂ ಏಕೆ ಎಂದು ಹಣಕಾಸು ಸಚಿವಾಲಯದ ಕಂದಾಯ ಇಲಾಖೆಯು ಉದ್ಯಮ ವ್ಯವಹಾರಗಳ ಸಚಿವಾಲಯದ ವಿವರಣೆ ಕೇಳಿದೆ.

9.2 ಲಕ್ಷ ರೂ. ಆದಾಯ ತೆರಿಗೆ ಬಾಕಿಯಿರಿಸಿರುವ ಕುರಿತು ಅರವಿಂದ್ ಕೇಜ್ರಿವಾಲ್ ನೋಟಿಸ್ ಎದುರಿಸುತ್ತಿರುವ ನಡುವೆ, ಆಕೆಯ ಪತ್ನಿಯ ಸೇವಾ ನಿಯೋಜನೆ ವಿಸ್ತರಣೆಯ (deputation) ಕುರಿತು ಪ್ರಶ್ನಿಸಿರುವುದು ಗಮನಾರ್ಹವಾಗಿದೆ. ಅಂದಹಾಗೆ, ಅರವಿಂದ್ ಕೇಜ್ರಿವಾಲ್ ಅವರು ಇಂಡಿಯನ್ ರೆವೆನ್ಯೂ ಸರ್ವಿಸ್ ನ (ಐಆರ್ಎಸ್) ಮಾಜಿ ಅಧಿಕಾರಿ.

ಸಮಾಜ ಸೇವಕ ಅಣ್ಣಾ ಹಜಾರೆ ತಂಡದ ಸದಸ್ಯ ಅರವಿಂದ್ ಕೇಜ್ರಿವಾಲ್‌ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಆದಾಯ ತೆರಿಗೆ ಇಲಾಖೆಯ (ಮಾತೃ ಸಂಸ್ಥೆ) ಅಧಿಕಾರಿಣಿ. ಎಸ್‌ಎಫ್‌ಐಒ ಇಲಾಖೆಯಲ್ಲಿ ಕೆಲವು ತಿಂಗಳ ಹಿಂದೆಯೇ ಸುನೀತಾರ ನಿಯೋಜಿತ ಸೇವಾವಧಿ ಮುಗಿದಿದ್ದರೂ ಆಕೆಯನ್ನು ಅಲ್ಲೇ ಮುಂದುವರಿಸಲಾಗಿದೆ.

ಸೇವಾ ನಿಯಮಗಳ ಪ್ರಕಾರ, ಕಂದಾಯ ಇಲಾಖೆಯ ಸಮ್ಮತಿ ಪಡೆದ ಬಳಿಕವಷ್ಟೇ ಅವರ ನಿಯೋಜನೆಯನ್ನು ವಿಸ್ತರಿಸಿಕೊಳ್ಳಬಹುದು. ಗಮನಾರ್ಹವೆಂದರೆ ಆದಾಯ ತೆರಿಗೆ ಇಲಾಖೆಯೇ ಸಿಬ್ಬಂದಿ ಕೊರತೆಯ ಸಮಸ್ಯೆ ಎದುರಿಸುತ್ತಿದೆ. ತಮ್ಮ ಇಲಾಖೆಗೆ ಸುಮಾರು 18,000 ಸಿಬ್ಬಂದಿಯ ಆವಶ್ಯಕತೆ ಇದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಆದಾಯ ತೆರಿಗೆ ಇಲಾಖೆಯು ಈ ಹಿಂದೆ ಪತ್ರ ಬರೆದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+