ಪಕ್ಷಪಾತದ ಬನ್ನೂರಮಠ ಲೋಕಾಯುಕ್ತರಾಗುವುದು ಬೇಡ್ವೇ ಬೇಡ: ಖಾಸಗಿ ದೂರು

ಕುತೂಹಲದ ಸಂಗತಿಯೆಂದರೆ, ರಾಜ್ಯ ಸರ್ಕಾರ ಬನ್ನೂರಮಠ ಅವರ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡುವ ಮುನ್ನವೇ ಅಂದರೆ, ಅ. 23ರಂದೇ ಜೆಡಿಎಸ್‌ನ ಮಾಜಿ ಶಾಸಕ ಶಿವಶಂಕರ್ ಈ ದೂರನ್ನು ಸಲ್ಲಿಸಿದ್ದಾರೆ.
'ಬನ್ನೂರಮಠ ಅವರು ನ್ಯಾಯಾಧೀಶರಾಗಿದ್ದ ಸಂದರ್ಭದಲ್ಲಿ ತೀರ್ಪು ನೀಡುವಾಗ ತಾರತಮ್ಯ ಎಸಗುತ್ತಿದ್ದರು. ಇಂತಹವರನ್ನು ಲೋಕಾಯುಕ್ತ ಹುದ್ದೆಗೆ ನೇಮಕ ಮಾಡಬಾರದು' ಎಂದು ಶಿವಶಂಕರ್ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರಿಗೆ ದೂರು ನೀಡಿದ್ದಾರೆ.
ನ್ಯಾಯಮೂರ್ತಿಗಳಾಗಿದ್ದಾಗ ಒಂದೇ ರೀತಿಯ ಎರಡು ಪ್ರಕರಣಗಳಲ್ಲಿ ಭಿನ್ನ ತೀರ್ಪು ನೀಡುವ ಮೂಲಕ ಬನ್ನೂರಮಠ ಅವರು ತಾರತಮ್ಯ ಧೋರಣೆ ತೋರಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.












Click it and Unblock the Notifications