ಪಾರ್ಕ್ ಜಾಗದಲ್ಲಿ ಮನೆ: ಇದ್ಯಾವ ನ್ಯಾಯ ನ್ಯಾ. ಬನ್ನೂರಮಠರೇ?
ಬೆಂಗಳೂರು,
ಅ.28: 'ನಮ್ಮ ದಾಖಲೆಗಳ ಪ್ರಕಾರ ಬನ್ನೂರಮಠ ಅವರಿಗೆ ಹಂಚಿಕೆಯಾಗಿರುವ ನಿವೇಶನ (2118-ಎ)ವು ವಾಸ್ತವವಾಗಿ ಉದ್ಯಾನವನಕ್ಕಾಗಿ ಮೀಸಲಿಟ್ಟ ಪ್ರದೇಶ. ಬಡಾವಣೆಯಲ್ಲಿ ಉದ್ಯಾನಕ್ಕೆ ಮೀಸಲಾದ ಪ್ರದೇಶವನ್ನು ನ್ಯಾಯಮೂರ್ತಿಗಳಿಗೆ ಹಂಚಿಕೆ ಮಾಡಿರುವುದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗುತ್ತದೆ' ಎನ್ನುತ್ತಿದ್ದಾರೆ ಬೆಂಗಳೂರು ನಗರ ಜಿಲ್ಲೆಯ ಸರ್ಕಾರಿ ಜಮೀನು ಒತ್ತುವರಿ ಕುರಿತ ಜಂಟಿ ಸದನ ಸಮಿತಿಯ ಅಧ್ಯಕ್ಷ ಎ.ಟಿ. ರಾಮಸ್ವಾಮಿ ಅವರು! id="toptextpromo">ಬೆಂಗಳೂರು
ನಗರ ಜಿಲ್ಲೆಯ ಸರ್ಕಾರಿ ಜಮೀನು ಒತ್ತುವರಿ ಕುರಿತು ಸಮಗ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿರುವ ಎ.ಟಿ. ರಾಮಸ್ವಾಮಿ ಅವರು 'ಕಾನೂನು ಪ್ರಕಾರ ನ್ಯಾಯಮೂರ್ತಿಗಳು ಈ ಬಡಾವಣೆಯಲ್ಲಿ ನಿವೇಶನವನ್ನೇ ಖರೀದಿಸುವಂತಿಲ್ಲ. ಏಕೆಂದರೆ, ಈ ಬಡಾವಣೆ ನಿರ್ಮಾಣವಾಗಿರುವುದು ನ್ಯಾಯಾಂಗ ಇಲಾಖೆ ನೌಕರರಿಗೆ ನಿವೇಶನ ಒದಗಿಸಲು ಮಾತ್ರ' ಎನ್ನುತ್ತಾರೆ. id='are-slot-1' class='oiad oi-axt oiadv'> id='top-searched-articles'>'ನ್ಯಾಯಾಧೀಶರು
ನ್ಯಾಯಾಂಗ ಇಲಾಖೆಯ ನೌಕರರಲ್ಲ. ವಾಸ್ತವವಾಗಿ ಅವರು ಸಂವಿಧಾನ ನಿಯೋಜಿತ ಪ್ರತಿನಿಧಿಗಳು. ಇಂತಹ ಉನ್ನತ ಸ್ಥಾನದಲ್ಲಿರುವವರು ನೌಕರರಿಗೆ ನೀಡಬೇಕಾದ ನಿವೇಶನವನ್ನು ಪಡೆದುಕೊಳ್ಳುವುದು ಕಾನೂನು ದೃಷ್ಟಿಯಿಂದ ಸರಿಯಲ್ಲ ' ಎಂದೂ ಅವರು ವಿವರಿಸುತ್ತಾರೆ.











Click it and Unblock the Notifications