ಸದ್ಭಾವನಾ ಉಪವಾಸ ವೆಚ್ಚದ ಲೆಕ್ಕ ಬಿಲ್ಕುಲ್ ನೀಡೊಲ್ಲ: ಮೋದಿ

ವಡೋದರಾ ಮೂಲದ ಆರ್ ಟಿಐ ಕಾರ್ಯಕರ್ತರಾದ ರೋಹಿತ್ ಪ್ರಜಾಪತಿ ಮತ್ತು ತೃಪ್ತಿ ಶಾ ಅವರು ಸಂಬಂಧಿತ ಮಾಹಿತಿ ಕೋರಿ ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಲು ಗೃಹ ಸಚಿವಾಲಯದ ಉಪಕಾರ್ಯದರ್ಶಿ ಡಿ.ಆರ್. ಪಟೇಲ್ ಸಾಧ್ಯವಿಲ್ಲ ಎಂದಿದ್ದಾರೆ. ಬಹು ಸಂಸ್ಥೆಗಳು ಮತ್ತು ಇಲಾಖೆಗಳಿಗೆ ಸಂಬಂಧಿಸಿದ ಪ್ರಶ್ನೆಗೆ ಗೃಹ ಸಚಿವಾಲಯವು ಉತ್ತರಿಸಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯೆಯಲ್ಲಿ ಸ್ಪಷ್ಟ ಪಡಿಸಲಾಗಿದೆ.
ವಿವಿಧ ಸರಕಾರಿ ಇಲಾಖೆಗಳು, ಅರೆ ಸರಕಾರಿ ಸಂಸ್ಥೆಗಳು ಮತ್ತು ರಾಜ್ಯ ಮಾಲೀಕತ್ವದ ಮಂಡಳಿಗಳು ಮತ್ತು ನಿಗಮಗಳು ಈ ಕಾರ್ಯಕ್ರಮದ ಪ್ರಾಯೋಜತಕತ್ವ ವಹಿಸಿದ್ದುದರಿಂದ ಗೃಹ ಸಚಿವಾಲಯವು ಈ ಪ್ರಶ್ನೆಗಳಿಗೆ ಉತ್ತರಿಸಲು ಬಾಧ್ಯವಾಗಿಲ್ಲ ಎಂದು ಪಟೇಲ್ ಅರ್ಜಿದಾರರಿಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
ಉಪವಾಸದ ಮೊದಲ ದಿನವೇ ಶಾ ಮತ್ತು ಪ್ರಜಾಪತಿ ಈ ಕುರಿತು ಮುಖ್ಯಮಂತ್ರಿಯವರ ಕಚೇರಿಗೆ ಅರ್ಜಿ ನೀಡಿದ್ದರು. ಆದರೆ ಅರ್ಜಿಯನ್ನು ಗೃಹ ಸಚಿವಾಲಯಕ್ಕೆ ವರ್ಗಾಯಿಸಲಾಗಿತ್ತು. ಆದಾಗ್ಯೂ, ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದುದರಿಂದ ಆ ಅರ್ಜಿಗೆ ಉತ್ತರಿಸಲು ಒಂದು ತಿಂಗಳ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಗೃಹ ಸಚಿವಾಲಯವು ತರಾತುರಿಯಲ್ಲಿ ಇಂತಹದೊಂದು ಪ್ರತಿಕ್ರಿಯೆಯನ್ನು ನೀಡಿದೆ.












Click it and Unblock the Notifications