ರಾಹುಲ್ ಸ್ಥಾನಕ್ಕೆ ಪ್ರಿಯಾಂಕಾ, ಸಿಂಗ್ ಪಟ್ಟಕ್ಕೆ ರಾಹುಲ್

Priyanka Gandhi
ಉತ್ತರ ಪ್ರದೇಶ, ಅ.23: ಉತ್ತರ ಪ್ರದೇಶದಲ್ಲಿ ಮತ್ತೆ ಕಾಂಗ್ರೆಸ್ ಬಾವುಟ ಹಾರಿಸಬೇಕು, ರಾಹುಲ್ ಸ್ಥಾನಕ್ಕೆ ಪ್ರಿಯಾಂಕಾಳನ್ನು ತರಬೇಕು, ರಾಹುಲ್ ಪ್ರಧಾನಿ ಪಟ್ಟಕ್ಕೇರಬೇಕು ಇದು ಸೋನಿಯಾ ಅವರ ಬಹುದಿನದ ಆಸೆ ಹಾಗೂ ಸದ್ಯದ ಅಪೇಕ್ಷೆಯಾಗಿದೆ.

ಸೋನಿಯಾ ಅನುಪಸ್ಥಿತಿಯಲ್ಲಿ ರಾಹುಲ್ ಅಲ್ಲದೆ, ಪ್ರಿಯಾಂಕಾ ಗಾಂಧಿ ಕೂಡಾ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು.

ಸೋನಿಯಾ ರಚಿಸಿದ್ದ ಉನ್ನತ ಮಟ್ಟದ ಸಮಿತಿ ಹಾಗೂ ಅದಕ್ಕೆ ಹೊಂದಿಕೊಂಡಂತೆ ಕಾರ್ಯ ನಿರ್ವಹಿಸುತ್ತಿದ್ದ ಜನಾರ್ದನ ದ್ವಿವೇದಿ, ಅಹ್ಮದ್ ಪಟೇಲ್ ಹಾಗೂ ಎಕೆ ಅಂಟನಿ ಅವರ ಕಾರ್ಯ ನಿರ್ವಹಣೆ ವೈಖರಿ ಪ್ರಿಯಾಂಕಾ ಸೋನಿಯಾಗೆ ವರದಿ ನೀಡುತ್ತಿದ್ದರಂತೆ.

ಮಾಹಿತಿಗಳ ಪ್ರಕಾರ 2014ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಕಣಕ್ಕಿಳಿಯಲಿದ್ದಾರೆ. ರಾಯ್ ಬರೇಲಿಯಿಂದ ಪ್ರಿಯಾಂಕಾ ವಡ್ರಾ ಸ್ಪರ್ಧಿಸುವ ಸಾಧ್ಯತೆಯಿದೆ.

ನಂತರ ವಯೋವೃದ್ಧ, ಜ್ಞಾನವೃದ್ಧ ಮನಮೋಹನ್ ಸಿಂಗ್ ಅವರನ್ನು ರಾಷ್ಟ್ರಪತಿ ಕುರ್ಚಿಯಲ್ಲಿ ಕೂರಿಸಲಾಗುವುದು.

2013ಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಅವರ ರಾಜ್ಯ ಸಭಾ ಸದಸ್ಯತ್ವದ ಅವಧಿ ಮುಗಿಯಲಿದೆ. 2014ರ ತನಕ ರಾಹುಲ್ ಗೆ ಪಟ್ಟ ಒಲಿಯುವುದಿಲ್ಲ ಎಂದು ಆಪ್ತ ಜ್ಯೋತಿಷಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+