ವಿಶ್ವಸಂಸ್ಥೆ: ಪಾಕ್ ಪರ ಭಾರತ ವೋಟ್ ಮಾಡಿತೇ?

ಪಾಕಿಸ್ತಾನದ ಜೊತೆಗೆ ಮೊರಾಕ್ಕೊ, ಗ್ವಾಟಿಮಾಲ ಮತ್ತು ಟೋಗೊ ಜೊತೆಗೆ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯನಾಗಿ ಆಯ್ಕೆಯಾಗಿದೆ. ಆ ರಾಷ್ಟ್ರಗಳ ಸದಸ್ಯತ್ವದ ಅವಧಿ 2012ರ ಜನವರಿ ಒಂದರಿಂದ ಪ್ರಾರಂಭವಾಗಲಿದೆ. ಪಾಕಿಸ್ತಾನವು ಕಳೆದ ಸಾಲಿನಲ್ಲಿ 10 ತಾತ್ಕಾಲಿಕ ರಾಷ್ಟ್ರಗಳಲ್ಲಿ ಸೇರಲು ಭಾರತದ ಪರ ಮತ ಚಲಾಯಿಸಿತ್ತು ಎನ್ನಲಾಗಿತ್ತು.
ರಹಸ್ಯ ಮತದಾನ ಪದ್ಧತಿಯಲ್ಲಿ 193 ಸದಸ್ಯರ ವಿಶ್ವಸಂಸ್ಥೆಯ ಸಭೆಯಲ್ಲಿ ಪಾಕಿಸ್ತಾನ 129 ಮತಗಳನ್ನು ಪಡೆದು ಆಯ್ಕೆಗೊಂಡಿದೆ. (ಆಯ್ಕೆಯಾಗಲು 128 ಮತಗಳು ಬೇಕು, 129ನೇ ವೋಟು ಭಾರತ ಹಾಕಿದೆ ಎಂದು ಪಾಕಿಸ್ತಾನ ಭಾವಿಸಿದೆ)ಭಾರತ ನಮ್ಮ ಪರವಾಗಿ ಮತ ಚಲಾಯಿಸಿರುವ ಸಂಪೂರ್ಣ ವಿಶ್ವಾಸ ನಮಗಿದೆ ಶ್ವಸಂಸ್ಥೆಯಲ್ಲಿನ ಪಾಕ್ ಪ್ರತಿನಿಧಿ ಅಬ್ದುಲ್ಲಾ ಹುಸೈನ್ ಹಾರೂನ್ ಹೇಳಿದ್ದಾರೆ.
ಹತ್ತೊಂಬತ್ತು ವರ್ಷಗಳ ಸುದೀರ್ಘ ಸಮಯದ ಬಳಿಕ ಭಾರತ 2010ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತಾತ್ಕಾಲಿಕ ಸದಸ್ಯ ಸ್ಥಾನ ಪಡೆಯಿತು. ಭಾರತ 187 ಮತಗಳ ಭರ್ಜರಿ ಗೆಲುವು ಪಡೆದಿತ್ತು.












Click it and Unblock the Notifications