ಸ್ವಿಸ್ ಬ್ಯಾಂಕ್ ಗಳಲ್ಲಿದ್ದ ಭಾರತೀಯರ ಕಪ್ಪು ಹಣ ಮಂಗಮಾಯ

ಬ್ಯಾಂಕ್ ಸೇವೆಗಳ ಕುರಿತು ಯಾವ ದೇಶಗಳೊಂದಿಗೆ ಭಾರತ ದ್ವಿಪಕ್ಷೀಯ ಒಪ್ಪಂದ ಹೊಂದಿಲ್ಲವೋ ಅಂತಹ ರಾಷ್ಟ್ರಗಳ ಬ್ಯಾಂಕುಗಳಿಗೆ ಈ ಕಾಳಧನವನ್ನು ಸುರಕ್ಷಿಯವಾಗಿ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ. ಕಾಳ ಧನ ವಾಪಸ್ ತರುವ ಬಗ್ಗೆ ಸೂಕ್ತ ನೀತಿ ರೂಪಿಸಲು ಭಾರತ ಸರಕಾರ ವಿಳಂಬ ಧೋರಣೆ ತಾಳಿರುವುದರ ಸದುಪಯೋಗ ಪಡಿಸಿಕೊಂಡು, ಸ್ವಿಸ್ ಬ್ಯಾಂಕುಗಳಲ್ಲಿ ಇಟ್ಟಿರುವ ಹಣವನ್ನು ಭಾರತೀಯರು ಬೇರೆ ದೇಶಗಳಿಗೆ ವರ್ಗಾಯಿಸಿದ್ದಾರೆ ಎನ್ನಲಾಗಿದೆ.
ಮಕಾವ್, ಐಲ್ ಆಫ್ ಮಾನ್, ನ್ಯೂ ಜೆರ್ಸಿ ಐಲ್ಯಾಂಡ್, ಕೆಮಾನ್ ಐಲ್ಯಾಂಡ್ಸ್ ಮತ್ತು ಸೀಷೆಲ್ಸ್ ರಾಷ್ಟ್ರಗಳಲ್ಲಿರುವ ಬ್ಯಾಂಕುಗಳತ್ತ ಭಾರತೀಯರ ಕಪ್ಪು ಹಣ ವರ್ಗಾವಣೆಗೊಂಡಿವೆ. ಸ್ವಿಸ್ ಬ್ಯಾಂಕ್ ಖಾತೆಗಳ ಬಗ್ಗೆ ನಿಗಾಯಿಟ್ಟಿರುವ ಭಾರತದ ತನಿಖಾ ಸಂಸ್ಥೆಗಳು ಅವ್ಯಾಹತವಾಗಿ ಹಣ ವರ್ಗಾವಣೆಯಾಗುತ್ತಿರುವುದನ್ನು ಒಪ್ಪಿಕೊಂಡಿವೆ.
ಭಾರತದ ಆದಾಯ ತೆರಿಗೆ ಇಲಾಖೆ ಮತ್ತು ಹಣಕಾಸು ಬೇಹು ಸಂಸ್ಥೆಗಳು ಮೂಕ ಪ್ರೇಕ್ಷಕನಾಗಿ, ಕೈಕಟ್ಟಿಕೊಂಡು ಕುಳಿತಿವೆ. ಏನೂ ಮಾಡಲಾಗದೆ ಅಸಹಾಯಕ ಸ್ಥಿತಿಯಲ್ಲಿವೆ ಎಂದು ತಿಳಿದುಬಂದಿದೆ.












Click it and Unblock the Notifications