ನಿಶ್ಚಿತಾರ್ಥವಾಗಿದ್ದ ಯುವತಿಯ ಜತೆ ಪೊಲೀಸ್ ಪೇದೆ ಪರಾರಿ
ಚಾಮರಾಜನಗರ,
ಅ. 23: ಮಹೇಶನ ವರಿಸಲು ಮಹೇಶ್ವರಿ ಓಡಿಹೋದ ಪ್ರಸಂಗವಿದು. ಏನಪಾ ಅಂದರೆ ವಿವಾಹಕ್ಕೆ ನಿಶ್ಚಿತಾರ್ಥವಾಗಿದ್ದ ಯುವತಿ ಹಾಗೂ ಅವಳ ಪ್ರಿಯಕರ ಪೊಲೀಸ್ ಪೇದೆ ಪರಾರಿಯಾದ ಘಟನೆ ಶುಕ್ರವಾರ ರಾತ್ರಿ ಗುಂಡ್ಲುಪೇಟೆ ತಾಲೂಕಿನಲ್ಲಿ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ರಂಗುಪುರ ಗ್ರಾಮದ ಮಹೇಶ್ವರಿ ಎಂಬಾಕೆಯೇ ಪೇದೆ ಮಹೇಶ್ ಜತೆ ಪರಾರಿಯಾದ ಯುವತಿ. id="toptextpromo">ರಂಗುಪುರದ
ಗ್ರಾಮದ ರಾಮಣ್ಣ ಎಂಬವರ ಪುತ್ರಿ ಮಹೇಶ್ವರಿ ಬೇಗೂರಿನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಈ ವೇಳೆ ಗುಂಡ್ಲುಪೇಟೆ ತಾಲೂಕಿನ ಹಿರೇಬೇಗೂರು ಪೊಲೀಸ್ ಠಾಣೆಯ ಪೇದೆ ಮಹೇಶನ ಪರಿಚಯವಾಗಿದ್ದು, ತದನಂತರ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ. id='are-slot-1' class='oiad oi-axt oiadv'> id='top-searched-articles'>ಇದನ್ನರಿತ
ಮಹೇಶ್ವರಿ ಕುಟುಂಬ ವರ್ಗದವರು ಬೇರೆ ವರನೊಂದಿಗೆ ವಿವಾಹ ನೆರೆವೇರಿಸಲು ನಿಶ್ಚಿತಾರ್ಥ ನಡೆಸಿದ್ದರು. ಒಲ್ಲದ ಮದುವೆಯನ್ನು ನಿರಾಕರಿಸುತ್ತಿದ್ದ ಮಹೇಶ್ವರಿ ಪ್ರಿಯಕರನೊಂದಿಗೆ ಕಳೆದ ರಾತ್ರಿ ಪರಾರಿಯಾಗಿದ್ದಾಳೆ. ಈ ಬಗ್ಗೆ ಮಹೇಶ್ವರಿ ಕುಟುಂಬದವರು ಗುಂಡ್ಲುಪೇಟೆ ಪೊಲೀಸ್ ಠಾಣೆಯ ಪೇದೆ ಮಹೇಶ್ ವಿರುದ್ಧ ಅಪಹರಣದ ದೂರು ನೀಡಿದ್ದಾರೆ.











Click it and Unblock the Notifications