ಯಡಿಯೂರಪ್ಪ ಮಾಡಿದ್ದು ಅಕ್ರಮವಲ್ಲ: ಗಡ್ಕರಿ ಪುನರುಚ್ಚಾರ
ಮುಂಬೈ,
ಅ. 23: ಭ್ರಷ್ಟಾಚಾರದ ವಿಷಯದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ತೀರ್ಥಯಾತ್ರೆಗೆ ಹೊರಡುವುದು ಒಳಿತು ಎಂದು ಇತ್ತೀಚೆಗಷ್ಟೇ ಹೇಳಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರು ತಮ್ಮ ಪಕ್ಷದ ಅತಿರಥ ಮಹರಾಥರ ಭ್ರಷ್ಟಾಚಾರದ ಬಗ್ಗೆ ಭಿನ್ನ ನಿಲುವು ಹೊಂದಿದ್ದಾರೆ! id="toptextpromo">ಅಷ್ಟಕ್ಕೂ
'ನಮ್ಮ' ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಏನು ಭ್ರಷ್ಟಾಚಾರ ಎಸಗಿದ್ದಾರೆ ಎಂದು ನೀವೆಲ್ಲ ಗುಲ್ಲೆಬ್ಬಿಸುತ್ತಿದ್ದೀರಿ? ಯಡಿಯೂರಪ್ಪ ಎಂಥ ಭ್ರಷ್ಟಾಚಾರ ಮಾಡಿದ್ದಾರೆ? ಅವರು ಯಾರಿಂದ ಹಣ ಪಡೆದುಕೊಂಡಿದ್ದಾರೆ ಹೇಳಿ' ಎಂದು ಸುದ್ದಿಗಾರರಿಗೇ ಅವರು ಶನಿವಾರ ಮರುಪ್ರಶ್ನೆ ಹಾಕಿದರು. id='are-slot-1' class='oiad oi-axt oiadv'> id='top-searched-articles'>'ಯಡಿಯೂರಪ್ಪ
ಈಗ ತಮ್ಮ ವಿರುದ್ಧದ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಎದುರಿಸುತ್ತಿದ್ದಾರೆ. ಅವರ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಕಾಂಗ್ರೆಸ್ಸಿನ ಹಗರಣಗಳಿಗೆ ಹೋಲಿಸಲಾಗದು. ಯಡಿಯೂರಪ್ಪ ಮೇಲೆ ಆರೋಪ ಬಂದಾಕ್ಷಣವೇ ಅವರಿಂದ ರಾಜೀನಾಮೆ ಪಡೆದುಕೊಳ್ಳಲಾಗಿದೆ' ಎಂದು ಗಡ್ಕರಿ ಸಮರ್ಥಿಸಿಕೊಂಡರು.











Click it and Unblock the Notifications