ಯಡಿಯೂರಪ್ಪಗೆ ಆಸ್ಪತ್ರೆ ಸಿಬ್ಬಂದಿ ಭೀತಿ ಕಾಡಿತ್ತಾ?

ಹಾಲಪ್ಪ ಹಾಗೂ ತೆಲಗಿಗೆ ಸುಳ್ಳು ಸರ್ಟಿಫಿಕೇಟ್ ಕೊಟ್ಟು ಆಸ್ಪತ್ರೆಯಲ್ಲೇ ಉಳಿಸಿಕೊಂಡಿದ್ದ ವೈದ್ಯರು, ಕಟ್ಟಾ ಎಂಟ್ರಿ ನಂತರ ಗಡಗಡ ಎಂದು ಬಿಟ್ಟರು. ಸಚಿವರ ಉಳಿಸಲು ಹೋಗಿ ವೃತ್ತಿ ಜೀವನ ಅಂತ್ಯವಾಗಿಸಿಕೊಳ್ಳಲು ಯಾವೊಬ್ಬ ವೈದ್ಯರು ಸಿದ್ಧರಿರಲಿಲ್ಲ.
ಕಟ್ಟಾ ರಂತೆ ಬಿಎಸ್ ವೈ ಕೂಡಾ ತಮ್ಮ ವಾರ್ಡ್ ಅನ್ನು ಹೋಟೆಲ್ ಮಾದರಿಯಲ್ಲಿ ಇಟ್ಟಿರಬೇಕು ಎಂದು ಆಗ್ರಹಿಸಿದ್ದಕ್ಕೆ ಆಸ್ಪತ್ರೆ ಸಿಬ್ಬಂದಿ ಕ್ಯಾರೆ ಎನ್ನಲಿಲ್ಲ. ಈ ನಡುವೆ ಯಾಕೆ ಬೇಕು ಉಸಾಬರಿ ಎಂದು ಡಾ. ಬಿಜಿ ತಿಲಕ್ ಸ್ವಯಂ ನಿವೃತ್ತಿ ಘೋಷಿಸಿಬಿಟ್ಟರು.
ಉಳಿದಂತೆ ಡಾ. ಗೋವಿಂದಪ್ಪ, ಡಾ, ಪ್ರಕಾಶ್. ಡಾ. ಬಾಲಜಿ ಪೈ ಕೂಡಾ ಯಡ್ಡಿಗಾಗಿ ತ್ಯಾಗಕ್ಕೆ ಸಿದ್ಧರಿರಲಿಲ್ಲ. ಈ ರೀತಿ ಪ್ರತಿಕೂಲ ಪರಿಸ್ಥಿತಿಯಲ್ಲಿ ಇಲ್ಲದ ಕಾಯಿಲೆ ಮೈಮೇಲೆ ಎಳೆದುಕೊಳ್ಳುವ ಭೀತಿ ಬಿಎಸ್ ಯಡಿಯೂರಪ್ಪ ಅವರನ್ನು ಕಾಡಿದ ಪರಿಣಾಮ ದಿಢೀರ್ ಎಂದು ಪರಪ್ಪನ ಅಗ್ರಹಾರಕ್ಕೆ ಹೋಗುವ ನಿರ್ಧಾರ ಮಾಡಿದ್ದಾರೆ.
ಅಡ್ವಾಣಿ ಮಾತಿಗೆ ಬೇಸರವಾಗಿದೆ. ಜೈಲಲ್ಲೇ ಸಾಯುತ್ತೀನಿ, ಹೇಡಿಯಲ್ಲ ಎಂದು ಯಡಿಯುರಪ್ಪ ಅವರು ಯೋಗೇಶ್ವರ್, ಸೋಮಣ್ಣ ಬಳಿ ಹೇಳಿರುವ ಬಗ್ಗೆ ಮಾಹಿತಿ ಇಲ್ಲ. ಹೊರಗಡೆ ಆ ರೀತಿ ಸುದ್ದಿ ಹಬ್ಬಿಸುವಂತೆ ಹೇಳಲಾಗಿದೆ.
ಜೈಲಿನಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಏನು ಮಾಡುತ್ತಿದ್ದಾರೆ...?












Click it and Unblock the Notifications