ಕಟ್ಟಾ ಯಡ್ಡಿಗೆ ಹೇಳಿದ್ದು ತಿಗಣೆ ಬಗ್ಗೆ ಮಾತ್ರ ಅಲ್ಲ

ವಿಕ್ಟೋರಿಯಾ ಆಸ್ಪತ್ರೆ ಮೂಲ ಸೌಕರ್ಯಗಳ ಕೊರತೆ, ನೀರಿಲ್ಲ, ಕರೆಂಟ್ ಇಲ್ಲ, ಕೇಬಲ್ ಟಿವಿ ಇಲ್ಲ, ಹಾಸಿಗೆ, ದಿಂಬು ಸರಿಯಿಲ್ಲ, ಶೌಚಾಲಯದಲ್ಲಿ ಸುಗಂಧವಿಲ್ಲ, ಮಲಗುವ ಕೋಣೆ ವಾಸ್ತು ಸರಿಯಿಲ್ಲ, ದಿಂಬು ಹಾಕಿದರೂ ಉತ್ತರ ದಿಕ್ಕಿಗೆ ಹಾಕಿ ಮಲಗಬೇಕು. ದಕ್ಷಿಣದಲ್ಲಿ ಶೌಚಾಲಯ ಅದು ನಿಮ್ಗೆ ಆಗಿಬರೋಲ್ಲ.
ಬೆಳಗ್ಗೆ ವಾಕಿಂಗ್ ಮಾಡೋಕೆ ಒಳ್ಳೆ ಪಾರ್ಕ್ ಇಲ್ಲ ಅದು ಇದೂ ಎಂದು ಕರ್ನಾಟಕದ ಮಾಜಿ ಸಚಿವರೇ ಸರ್ಕಾರಿ ಸ್ವಾಮ್ಯದ ಆಸ್ಪತ್ರೆ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಅವರ ಕಿವಿಯೂದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಈ ಎಲ್ಲಾ ಕಾರಣಗಳಿಗಿಂತ ಯಡಿಯೂರಪ್ಪ ಪರಪ್ಪನ ಅಗ್ರಹಾರಕ್ಕೆ ಹಿಂತಿರುಗಲು ಮುಖ್ಯ ಕಾರಣ, ಡಾ. ತಿಲಕ್ ನಿರ್ಗಮನ ಎನ್ನಲಾಗಿದೆ. ಹಾಲಪ್ಪ, ತೆಲಗಿ, ಕಟ್ಟಾ ಸೇರಿದಂತೆ ವಿವಿಐಪಿ ರೋಗಿಗಳಿಗೆ ಬೇಕಾದ ಹಾಗೆ ಆರೈಕೆ ಮಾಡುತ್ತಿದ್ದ ವೈದ್ಯರ ತಂಡದ ಕೊರತೆಯೇ ಯಡಿಯೂರಪ್ಪ ಅವರನ್ನು ಕಾಡಿತ್ತು.
ವಿವಿಐಪಿ ರೋಗಿಗಳಿಗೆ ಪಾಠ ಕಲಿಸಲು ವೈದ್ಯರು ಸಜ್ಜಾಗಿದ್ದರು ಎನ್ನಲಾಗಿದೆ.. ಇದಕ್ಕೆ ಕಾರಣ ಏನು..?












Click it and Unblock the Notifications