ಯಡ್ಡಿಗೆ ಜೈಲು: ಮೆಡಿಕಲ್ ಸೀಟು ಹಗರಣದ ರೂವಾರಿ ದತ್ತಾ ದೂರು ಹಾಸ್ಯಾಸ್ಪದ

ವೈದ್ಯಕೀಯ ಸೀಟು ಕೊಡಿಸುವುದಾಗಿ 17 ವಿದ್ಯಾರ್ಥಿಗಳಿಗೆ ವಂಚಿಸಿ ಜೈಲು ಸೇರಿದ್ದ ಆರೋಪಿ ವೈ.ಎಸ್.ವಿ. ದತ್ತ ಅವರ ಹಿನ್ನೆಲೆಯನ್ನು ಗಮನಿಸದೆ ಜನಪರ ಕಾಳಜಿಯುಳ್ಳ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಕಾನೂನುಕ್ರಮ ಕೈಗೊಂಡಿದ್ದಾರೆ.
ದೂರು ನೀಡಿರುವ ವ್ಯಕ್ತಿಗಳ ಇತಿಹಾಸ ಪರಿಶೀಲಿಸದೆ ಏಕಪಕ್ಷೀಯವಾಗಿ ವಿಚಾರಣೆಗೆ ಅಂಗೀಕರಿಸಿ ಮಾಜಿ ಸಿಎಂ ವಿರುದ್ಧ ಸಮನ್ಸ್ ಜಾರಿ ಮಾಡಿದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ವರ್ತನೆಯ ಬಗ್ಗೆಯೂ ಶಂಕೆ ವ್ಯಕ್ತಪಡಿಸಿದ್ದಾರೆ.
ಜಮೀನು ಡಿನೋಟಿಫಿಕೇಷನ್ ಮಾಡುವ ಅಧಿಕಾರ ಮುಖ್ಯಮಂತ್ರಿಗೆ ಇರುತ್ತದೆ ಎಂಬ ಪರಿಜ್ಞಾನವೂ ಇಲ್ಲದ ವ್ಯಕ್ತಿಗಳು ದಾಖಲಿಸಿರುವ ಖಾಸಗಿ ದೂರನ್ನು ವಿಚಾರಣೆಗೆ ಅಂಗೀಕರಿಸಿರುವುದರ ಹಿಂದೆ ಭಾರಿ ಷಡ್ಯಂತರ ನಡೆದಿದೆ ಎಂದು ದೂರಿದ್ದಾರೆ. ಕ್ರಿಮಿನಲ್‌ಗಳು ನೀಡಿದ ಖಾಸಗಿ ದೂರು ಆಧರಿಸಿ ಜನಪರ ಕಾಳಜಿಯುಳ್ಳ ರಾಜಕಾರಣಿಯನ್ನು ವಿಚಾರಣೆಗೆ ಗುರಿಪಡಿಸಿ ಬಂಧಿಸಿರುವುದು ಕಾನೂನು ಬಾಹಿರ ಕೃತ್ಯವಾಗಿದೆ. ಲೋಕಾಯುಕ್ತ ವಿಶೇಷ ನ್ಯಾಯಾಲಯ ಪೂರ್ವಾಗ್ರಹ ಪೀಡಿತವಾಗಿ ನಡೆದುಕೊಂಡಿದೆ.
ರಾಜ್ಯಪಾಲರು ಒಂದು ಮೊಕದ್ದಮೆ ದಾಖಲಿಸಲು ಅನುಮತಿ ನೀಡಿದ್ದರು. ಇದನ್ನು ದುರುಪಯೋಗ ಮಾಡಿಕೊಂಡಿರುವ ಸಿರಾಜಿನ್ ಬಾಷಾ ಹಾಗೂ ಬಾಲರಾಜ್ 5 ಮೊಕದ್ದಮೆ ದಾಖಲಿಸಿದ್ದಾರೆ.
ಹಣ ಸುಲಿಗೆಗೆ ಯತ್ನಿಸಿದ್ದ ವಕೀಲರಾದ ಸಿರಾಜಿನ್ ಬಾಷಾ, ಬಾಲರಾಜ್ ನೀಡಿದ ದೂರಿನ ಸತ್ಯಾಸತ್ಯತೆ ಹಾಗೂ ಮೌಲ್ಯವನ್ನು ಪರಿಶೀಲಿಸದೆ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ ಎಂದು ವಕೀಲ ವಿಶ್ವನಾಥ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಆರೋಪಿಸಿದ್ದಾರೆ.












Click it and Unblock the Notifications