ಯಡ್ಡಿ ಜೈಲಿಗೆ: ಅನಂತ್, ಅಶೋಕ, ದಿವಾಕರ್, ನ್ಯಾ.ಹೆಗ್ಡೆ ಷಡ್ಯಂತರ

ಯಡಿಯೂರಪ್ಪ ವಿರುದ್ಧ ದೂರು ದಾಖಲಿಸಿದ ವ್ಯಕ್ತಿಗಳು ಮಾಜಿ ಸಿಎಂಗೆ ಬ್ಲ್ಯಾಕ್ ಮೇಲ್ ಮಾಡಿ ಭಾರಿ ಮೊತ್ತದ ಹಣ ಪಡೆಯಲು ಯತ್ನಿಸಿದ್ದರು. ಅವರ ಬೇಡಿಕೆಗೆ ಒಪ್ಪದ ಹಿನ್ನೆಲೆಯಲ್ಲಿ ರಾಜ್ಯಪಾಲರ ಪ್ರಭಾವ ಹಾಗೂ ಲೋಕಾಯುಕ್ತ ನ್ಯಾಯಾಲಯವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ವಕೀಲ ವಿಶ್ವನಾಥ್ ನ್ಯಾಯಾಲಯದ ಗಮನ ಸೆಳೆದಿದ್ದಾರೆ.
ಇಷ್ಟಕ್ಕೂ ಯಾರಪ್ಪಾ ಆ ಪ್ರಭಾವಿ ಬಿಜೆಪಿ ಮುಖಂಡರು ಷಡ್ಯಂತರ ರೂಪಿಸಿರುವವರು ಅಂದರೆ ಎಲ್.ಕೆ. ಅಡ್ವಾಣಿ, ಪ್ರಧಾನ ಕಾರ್ಯದರ್ಶಿ ಅನಂತ್‌ಕುಮಾರ್, ಗೃಹ ಸಚಿವ ಆರ್. ಅಶೋಕ್ ಹಾಗೂ ಯಡಿಯೂರಪ್ಪ ಅವರ ಮಾಜಿ ಕಾನೂನು ಸಲಹೆಗಾರರಾಗಿದ್ದ ದಿವಾಕರ್. ಇನ್ನು, ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಇವರಿಗೆ ಸಾಥ್ ನೀಡಿದ್ದಾರೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಮಾಜಿ ಲೋಕಾಯುಕ್ತ ನ್ಯಾ. ಹೆಗ್ಡೆ ಹಾಗೂ ಬಿಜೆಪಿಯ ಈ ಮುಖಂಡರು ಸುಳ್ಳು ದಾಖಲೆಗಳನ್ನು ಒದಗಿಸಿ ಯಡಿಯೂರಪ್ಪ ಅವರನ್ನು ಜೈಲಿಗೆ ಅಟ್ಟಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ಮೆಡಿಕಲ್ ಸೀಟು ಹಗರಣದಲ್ಲಿ ಜೈಲಿಗೆ ಹೋಗಿದ್ದ ದತ್ತಾ ದೂರು ಹಾಸ್ಯಾಸ್ಪದ ... ಮುಂದೆ ಓದಿ.












Click it and Unblock the Notifications